Home » ಆತ ಪಂಚೆಯೊಳಗೆ ತುರುಕಿಸಿಕೊಂಡದ್ದು ಬರೋಬ್ಬರಿ 10 ಟೀ ಶರ್ಟ್ ಗಳನ್ನು!!|ಟಿ-ಶರ್ಟ್ ದೋಚಲು ಹೋಗಿ ಮೂರು ನಾಮ ಹಾಕಿಸಿಕೊಂಡ ಖತರ್ನಾಕ್ ಕಳ್ಳ

ಆತ ಪಂಚೆಯೊಳಗೆ ತುರುಕಿಸಿಕೊಂಡದ್ದು ಬರೋಬ್ಬರಿ 10 ಟೀ ಶರ್ಟ್ ಗಳನ್ನು!!|ಟಿ-ಶರ್ಟ್ ದೋಚಲು ಹೋಗಿ ಮೂರು ನಾಮ ಹಾಕಿಸಿಕೊಂಡ ಖತರ್ನಾಕ್ ಕಳ್ಳ

0 comments

ಚೆನ್ನೈ: ಚಿನ್ನ, ಹಣಕ್ಕಾಗಿ ಹೊಂಚು ಹಾಕುವವರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಖದೀಮ ಟೀ-ಶರ್ಟ್ ಅನ್ನೇ ದೋಚಲು ಹೊರಟು ನಂತರ ಆತನ ಗುಟ್ಟು ರಟ್ಟಾಗಿ ಅಂಗಡಿ ಮಾಲೀಕರ ಕೈಗೆ ಸಿಕ್ಕಿಬಿದ್ದಿರೋ ಆಶ್ಚರ್ಯಕಾರಿ ಘಟನೆ ನಡೆದಿದೆ.

ಆರೋಪಿಯನ್ನು ತುತುಕುಡಿಯ ಸೆಲ್ವಮಧನ್ ಎಂದು ಗುರುತಿಸಲಾಗಿದ್ದು, ಈತ ಪಂಚೆಯೊಳಗೆ 10 ಟೀ ಶರ್ಟ್ ಕದ್ದು ಪರಾರಿ ಆಗಲು ಯತ್ನಿಸಿದ ಘಟನೆ ತಮಿಳುನಾಡಿನ ತಿಸಾಯನವಿಲೈ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ನಡೆದಿದೆ.

ಹಬ್ಬ ಇದ್ದ ಕಾರಣ ಹೆಚ್ಚು ಜನ ತುಂಬಿದ ಅಂಗಡಿಗೆ ನುಗ್ಗಿ ಲಾಭ ಗಳಿಸಲು ಪ್ರಯತ್ನಿಸಿದ ಆರೋಪಿ ಅಂಗಡಿಯ ಕೆಲಸಗಾರರ ಕೈಗೆ ಸಿಕ್ಕಿಹಾಕಿಕೊಂಡಿದ್ದು,ಇನ್ನೂ ಈ ಚಿತ್ರಣವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಮೊದಲಿಗೆ ಅಂಗಡಿಯ ಕೆಲಸಗಾರರಿಗೆ ಟೀ ಶರ್ಟ್ ಕೇಳಿ ನಂತರ ಅದನ್ನು ಟ್ರಯಲ್ ರೂಮ್‍ನಲ್ಲಿ ಧರಿಸಿ ಪರಿಶೀಲಿಸುವುದಾಗಿ ಹೇಳಿ ಹೋಗಿದ್ದಾನೆ. ಆದರೆ ಬಳಿಕ ಟೀ ಶರ್ಟ್ ಇಲ್ಲದೇ ಟ್ರಯಲ್ ರೂಮ್‍ನಿಂದ ಹೊರಗೆ ಬಂದಾಗ, ಆರೋಪಿಯನ್ನು ಅಂಗಡಿಯವರು ಟೀಶರ್ಟ್ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಟೀ ಶರ್ಟ್ ಸೈಜ್ ಸರಿ ಇಲ್ಲ ಎಂದು ಅದನ್ನು ಟ್ರಯಲ್ ರೂಮ್‍ನಲ್ಲಿಯೇ ಬಿಟ್ಟಿರುವುದಾಗಿ ಸೆಲ್ವಂ ಮಧನ್ ಹೇಳಿದ್ದಾನೆ.

ಈ ಬಗ್ಗೆ ಅನುಮಾನಗೊಂಡ ಅಂಗಡಿಯವರು ಕೂಡಲೆ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಮಾಲೀಕರು ಆರೋಪಿಗೆ ಬಟ್ಟೆಯನ್ನು ತೆಗೆಯುವಂತೆ ಸೂಚಿಸಿದ್ದಾರೆ. ಆಗ ಆರೋಪಿ 5 ಟೀಶರ್ಟ್ ಧರಿಸಿದ್ದು, ಪಂಚೆಯೊಳಗೆ 5 ಟೀ ಶರ್ಟ್ ಬಚ್ಚಿಟ್ಟಿಕೊಂಡಿರುವುದು ಪತ್ತೆಯಾಗಿದೆ.

ಆದರೆ ಈ ಘಟನೆ ಸಂಬಂಧ ಮಾಲೀಕರು ಯಾವುದೇ ದೂರು ನೀಡದೇ ಯುವಕನನ್ನು ಹಾಗೆಯೇ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ.

You may also like

Leave a Comment