Home » ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನನ್ನು ತವರಿಗೆ ಕರೆ ತರಲು ಹೊರಟ ತಮ್ಮ |ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಬಿ.ಎಸ್.ಎಫ್ ಯೋಧ ಹಾಗೂ ಅಕ್ಕನ ಮಗು ಸ್ಥಳದಲ್ಲೇ ಸಾವು!!

ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನನ್ನು ತವರಿಗೆ ಕರೆ ತರಲು ಹೊರಟ ತಮ್ಮ |ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಬಿ.ಎಸ್.ಎಫ್ ಯೋಧ ಹಾಗೂ ಅಕ್ಕನ ಮಗು ಸ್ಥಳದಲ್ಲೇ ಸಾವು!!

0 comments

ಹಾಸನ: ಗೌರಿ ಹಬ್ಬದ ಸಂಭ್ರಮದಲ್ಲಿ ಅಕ್ಕನನ್ನು ಮನೆಗೆ ಕರೆದೊಯ್ಯಲು ಬಂದ ಸಂದರ್ಭದಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿ ಯುವಕ ಹಾಗೂ ಅಕ್ಕನ ಮಗು ಕೊನೆಯುಸಿರೆಳೆದಿದ್ದಾರೆ.

ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಲಾಳನಪುರದ 22 ವರ್ಷದ ಶಂಕರ್ ಹಾಗು ಅರಕಲಗೂಡಿನ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿಲುವಾಗಿಲು ಬಳಿ ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನಿಗೆ ಬಾಗಿನ ಕೊಟ್ಟು ಜೊತೆಯಲ್ಲೇ ಅಕ್ಕ‌-ಭಾವ ಹಾಗೂ ಮಗುವನ್ನು ಹಬ್ಬಕ್ಕೆ ತವರಿಗೆ ಕರೆದೊಯ್ಯುವಾಗ ಈ ಭೀಕರ ಅಪಘಾತವಾಗಿದ್ದು,ತಮ್ಮ ಬಿ.ಎಸ್.ಎಫ್ ಯೋಧ ಹಬ್ಬಕ್ಕೆಂದೇ ರಜೆ ಮೇಲೆ ಊರಿಗೆ ಬಂದಿದ್ದ .

ಮಧು ಮತ್ತು ಪತ್ನಿ ಚೈತ್ರಾಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಅರಕಲಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

You may also like

Leave a Comment