Home » ನದಿಗೆ ಉರುಳಿ ಬಿದ್ದ ಹತ್ತಕ್ಕೂ ಅಧಿಕ ಶಾಲಾ ಮಕ್ಕಳಿದ್ದ ಬೊಲೆರೋ ಕಾರು |ಸ್ಥಳೀಯರಿಂದ ರಕ್ಷಣೆ

ನದಿಗೆ ಉರುಳಿ ಬಿದ್ದ ಹತ್ತಕ್ಕೂ ಅಧಿಕ ಶಾಲಾ ಮಕ್ಕಳಿದ್ದ ಬೊಲೆರೋ ಕಾರು |ಸ್ಥಳೀಯರಿಂದ ರಕ್ಷಣೆ

0 comments

ಹತ್ತಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದ ಬೊಲೆರೋ ಕಾರು ಬ್ಯಾಂಟಿ ನದಿಗೆ ಉರುಳಿಬಿದ್ದಿರುವ ಘಟನೆ ಶುಕ್ರವಾರ ಬಿಹಾರದ ಬೆಗುಸರೈನಲ್ಲಿ ನಡೆದಿದೆ.

ಖಾಸಗಿ ಶಾಲೆಯ ಮಕ್ಕಳು ಬೊಲೆರೋ ಕಾರಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಭಗವಾನ್ಪುರ ಪೊಲೀಸ್ ಠಾಣೆಯ ಸೂರ್ಯ ಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಕಾರಿನ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ನದಿಗೆ ಬಿದ್ದಿದ್ದು,ಸ್ಥಳೀಯರ ಸಹಾಯದಿಂದ ಎಲ್ಲಾ ಮಕ್ಕಳನ್ನು ನದಿಯಿಂದ ರಕ್ಷಿಸಲಾಯಿತು.

ಇದೀಗ ಮೂರು ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳು ಇನ್ನು ತಿಳಿದು ಬರಬೇಕಿದೆ.

You may also like

Leave a Comment