Home » ಕೋಳಿ ಸಾಗಾಟದ ಲಾರಿ ಪಲ್ಟಿ | ಕೋಳಿಗಾಗಿ ಜನರ ನೂಕು ನುಗ್ಗಲು

ಕೋಳಿ ಸಾಗಾಟದ ಲಾರಿ ಪಲ್ಟಿ | ಕೋಳಿಗಾಗಿ ಜನರ ನೂಕು ನುಗ್ಗಲು

by Praveen Chennavara
0 comments

ಉಡುಪಿ : ಕೋಳಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲೇ ಪಲ್ಟಿಯಾದ ಘಟನೆ ಸೆ.12ರಂದು ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂಜೂರು ಬಳಿ ಸಂಭವಿಸಿದೆ.

ಶಿವಮೊಗ್ಗ ಕಡೆಯಿಂದ ಮಂಗಳೂರು ಕಡೆಗೆ ಕೋಳಿಗಳನ್ನು ಹೇರಿಕೊಂಡು ಕಾರ್ಕಳ ಮಾರ್ಗವಾಗಿ ಸಾಗುತ್ತಿದ್ದಾಗ ಹಿರ್ಗಾನ ಗ್ರಾಮದ ಮೂರುರು ಅಂಚೆಕಚೇರಿಯ ಬಳಿ ನಡು ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ಘಟನೆಯಿಂದ ಲಾರಿ ಚಾಲಕ ಗಾಯಗೊಂಡಿದ್ದು, ಸಾವಿರಾರು ಕೋಳಿಗಳು ಸಾವನ್ನಪ್ಪಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಕೋಳಿಗಾಗಿ ಜನರ ನೂಕುನುಗ್ಗಲು
ಬೆಳ್ಳಂಬೆಳಗ್ಗೆ ಕೋಳಿ ಸಾಗಾಟದ ಲಾರಿ ಪಲ್ಟಿಯಾಗಿದೆ ಎಂಬ
ವಿಷಯ ತಿಳಿಯುತ್ತಿದ್ದಂತೆಯೇ ಜನರು ನಾ ಮುಂದು ತಾ ಮುಂದು ಎಂಬಂತೆ ಧಾವಿಸಿ ಸತ್ತು ಬಿದ್ದಿರುವ ಕೋಳಿಗಳನ್ನು ಕೈಗೆಸಿಕ್ಕಷ್ಟು ಬಾಚಿಕೊಂಡಿದ್ದಾರೆ. ಕೆಲವರು ಗೋಣಿಚೀಲಗಳಲ್ಲಿ ತುಂಬಿಸಿಕೊಳ್ಳುವ ತರಾತುರಿಯಲ್ಲಿದ್ದರು. ಅಪಘಾತದಲ್ಲಿ ಕೋಳಿ ಫಾರ್ಮ್ ಮಾಲೀಕ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರೆ, ಇತ್ತ ಕೆಲವರು ಕೋಳಿ ಸಿಕ್ಕಿತ್ತಲ್ಲಾ ಎಂದು ಒಳಗೊಳಗೇ ಖುಷಿಪಟ್ಟರು.

You may also like

Leave a Comment