Home » ಮಗಳಿದ್ದರೆ ಭವಿಷ್ಯ | ಮಗಳು ಹುಟ್ಟಿದ ಸಂಭ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪಾನಿಪುರಿ ಹಂಚಿದ ತಂದೆ

ಮಗಳಿದ್ದರೆ ಭವಿಷ್ಯ | ಮಗಳು ಹುಟ್ಟಿದ ಸಂಭ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪಾನಿಪುರಿ ಹಂಚಿದ ತಂದೆ

by Praveen Chennavara
0 comments

ಮಗಳು ಹುಟ್ಟಿದ ಸಂಭ್ರಮಕ್ಕೆ ಬೀದಿ ಬದಿ ಪಾನಿಪುರಿ ವ್ಯಾಪಾರಿ ಅಂಚಲ್‌ ಗುಪ್ತಾಬವರು ಸಾರ್ವಜನಿಕರಿಗೆ ಉಚಿತವಾಗಿ ಪಾನಿ ಪುರಿ ನೀಡಿ ಸಂಭ್ರಮಿಸಿಕೊಂಡರು.

ಭೋಪಾಲ್‌ನ ಕೋಲಾರ್ ಎಂಬಲ್ಲಿ 20 ವರ್ಷಗಳಿಂದ ಪಾನಿಪುರಿ ಅಂಗಡಿ ನಡೆಸುತ್ತಿರುವ ಅಂಚಲ್‌ ಗುಪ್ತಾ(30) ಕುಟುಂಬದಲ್ಲಿ ಆ.17ರಂದು ಮಗಳು ಜನಿಸಿದ್ದಾಳೆ. ಮದುವೆಯಾದಾಗಿನಿಂದಲೂ ಆತ ಹೆಣ್ಣು ಮಗುವೇ ಆಗಬೇಕೆಂದು ಕನಸು ಕಂಡಿದ್ದನಾದರೂ ಎರಡು ವರ್ಷ ಹಿಂದೆ ಆತನ ಪತ್ನಿಗೆ ಮೊದಲು ಗಂಡು ಮಗು ಜನಿಸಿದ್ದ.

ಮಗಳು ಹುಟ್ಟಿದ ಸಂತಸದಲ್ಲಿ ಅಂಚಲ್‌ ಮಗನ 2ನೇ ವರ್ಷದ ಜನ್ಮದಿನವಾದ ಸೆ.12ರಂದು ಎಲ್ಲರಿಗೂ ಉಚಿತವಾಗಿ ಪಾನಿಪುರಿ ಹಂಚಿದ್ದಾರೆ. ಮಗಳಿದ್ದರೆ ಭವಿಷ್ಯವಿದೆ ಎಂದು ಎಲ್ಲರಿಗೂ ಹೇಳುತ್ತಾ, ಪಾನಿಪುರಿ ಕೊಡಲಾಗಿದೆ

You may also like

Leave a Comment