Home » ಹೆಸರಾಂತ ವಿಶ್ವವಿದ್ಯಾನಿಲಯದ ತಜ್ಞರು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದ ಸತ್ಯ!!ವಿಶ್ವದಲ್ಲಿ ಮದುವೆಗಿಂತಲೇ ಮೊದಲು ಮಗುಬೇಕೆನ್ನುವ ಮಹಿಳೆಯರ ಸಂಖ್ಯೆ ಹೆಚ್ಚು!!

ಹೆಸರಾಂತ ವಿಶ್ವವಿದ್ಯಾನಿಲಯದ ತಜ್ಞರು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದ ಸತ್ಯ!!ವಿಶ್ವದಲ್ಲಿ ಮದುವೆಗಿಂತಲೇ ಮೊದಲು ಮಗುಬೇಕೆನ್ನುವ ಮಹಿಳೆಯರ ಸಂಖ್ಯೆ ಹೆಚ್ಚು!!

0 comments

ಇಡೀ ವಿಶ್ವದಲ್ಲಿ ಮದುವೆಯಾದ ಬಳಿಕ ಮಗು ಪಡೆಯುವುದು ಪದ್ಧತಿ. ಮದುವೆಗಿಂತ ಮೊದಲು ಮಗು ಹೆತ್ತರೆ ಸಮಾಜ ಆ ಹೆತ್ತಬ್ಬೆಯನ್ನು ಬೇರೆ ದೃಷ್ಟಿಯಲ್ಲಿ ನೋಡುವುದು ಅರಿತ ಸಂಗತಿ. ಇದಕ್ಕೆ ಕಾರಣ ಅನೈತಿಕ ಚಟುವಟಿಕೆ, ಮದುವೆಯಾಗುವುದಾಗಿ ನಂಬಿಸಿ ಬೆಳೆಸಿದ ಸಲುಗೆಯೂ ಆಗಿರಬಹುದು.ಆದರೆ ಸದ್ಯ ಮದುವೆಗಿಂತ ಮೊದಲು ಮಗು ಬೇಕು, ಆ ಬಳಿಕ ಮದುವೆ ಎನ್ನುವ ಮಹಿಳೆಯರೂ ಇದ್ದಾರೆ ಎನ್ನುವ ವಿಚಾರ ನಂಬಲಸಾಧ್ಯವಾದರೂ ಸತ್ಯ.

ವಿಶ್ವದಲ್ಲೇ ಮಹತ್ತರವಾದ ಪರಿವರ್ತನೆಯೊಂದು ಬೆಳಕಿಗೆ ಬಂದಿದ್ದು, ಕಳೆದ 20 ವರ್ಷಗಳಿಂದ ಮಹಿಳೆಯರಲ್ಲಿ ಆದ ಐತಿಹಾಸಿಕ ಬದಲಾವಣೆಯ ಬಗೆಗೆ ಹೊಸ ಅಧ್ಯಯನವೊಂದು ವರದಿ ನೀಡಿದೆ.

ಮದುವೆಯಾಗುವ ಮೊದಲೇ ಮಗು ಪಡೆಯುವ ಮಹಿಳೆಯರ ಸಂಖ್ಯೆ 1996ರಲ್ಲಿ ಸುಮಾರು 4ರಷ್ಟು ಇದ್ದು, ಕಳೆದ 20 ವರ್ಷಗಿಳಿಂದೀಚೆಗೆ 24.5 ನಷ್ಟು ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಲಿನ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.ಅದರಲ್ಲೂ ಪದವಿ ಪಡೆದ ಮಹಿಳೆಯರು ಮೊದಲು ಮಕ್ಕಳನ್ನು ಪಡೆದು ಆ ಬಳಿಕ ಮದುವೆಯಾಗುತ್ತಿರುವುದು ಅಚ್ಚರಿಯ ವಿಚಾರವಾಗಿದೆ ಎಂದು ಅಧ್ಯಯನ ನಡೆಸಿದ ತಜ್ಞರ ಅಭಿಪ್ರಾಯವಾಗಿದೆ.

You may also like

Leave a Comment