Home » ನಂಜನಗೂಡು ದೇವಸ್ಥಾನ ಧ್ವಂಸ, ಸರಕಾರದ ನಡೆಯ ವಿರುದ್ದಇಂದು ಸಂಜೆ ಕಡಬದಲ್ಲಿ ವಿ.ಹಿಂ.ಪ, ಬಜರಂಗದಳ ವತಿಯಿಂದ ಪ್ರತಿಭಟನೆ

ನಂಜನಗೂಡು ದೇವಸ್ಥಾನ ಧ್ವಂಸ, ಸರಕಾರದ ನಡೆಯ ವಿರುದ್ದ
ಇಂದು ಸಂಜೆ ಕಡಬದಲ್ಲಿ ವಿ.ಹಿಂ.ಪ, ಬಜರಂಗದಳ ವತಿಯಿಂದ ಪ್ರತಿಭಟನೆ

by Praveen Chennavara
0 comments

ಕಡಬ: ಮೈಸೂರು ಜಿಲ್ಲೆಯ ನಂಜನಗೂಡು ಶ್ರೀ ಮಹಾದೇವಮ್ಮ ದೇವಸ್ಥಾನವನ್ನು ಧ್ವಂಸಗೊಳಿಸಿದ ಸರಕಾರದ ನಡೆಯನ್ನು ಖಂಡಿಸಿ ಕಡಬ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಇಂದು ಸಂಜೆ 3 ಗಂಟೆಗೆ ಕಡಬದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕಡಬ ಪ್ರಖಂಡ ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ತಿಳಿಸಿದ್ದಾರೆ.

ಕಡಬ ಪಂಜ ಕ್ರಾಸ್ ಬಳಿ ಪ್ರತಿಭಟನೆ ನಡೆಯಲಿದ್ದು, ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿರುವ ಅವರು ಈ ಮಣ್ಣಿನಲ್ಲಿ ಹಿಂದೂಗಳ ಭಾವನೆಗೆ ನೋವು ಆದಾಗ ಸುಮ್ಮನಿರುವ ಪ್ರಶ್ನೆಯೇ ಇಲ್ಲ, ಸುಮಾರು 700 ವರ್ಷಗಳ ಇತಿಹಾಸ ಇರುವ ದೇವಸ್ಥಾನವನ್ನು ಕೆಡವಿದ್ದು,ಇದಕ್ಕೆ ಸರಕಾರವೇ ಹೊಣೆಯಾಗಿದ್ದು ಇದನ್ನು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

You may also like

Leave a Comment