Home » ತಾಯಿಯ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

ತಾಯಿಯ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

by Praveen Chennavara
0 comments

ತಾಯಿ ಸಾವನ್ನಪ್ಪಿದ ದುಃಖದಲ್ಲಿ ಮಗನು ಕೆರೆಗೆ ಹಾರಿ ಪ್ರಾಣಬಿಟ್ಟಿರುವ ಮನಃಕಲಕುವ ಘಟನೆ ಮೈಸೂರಿನ ಪಿರಿಯಾಪಟ್ಟಣದಿಂದ ವರದಿಯಾಗಿದೆ.

ಪಿರಿಯಾ ಪಟ್ಟಣದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಿವೃತ್ತ ಬಿಎಸ್‌ಎನ್‌ಎಲ್ ನೌಕರ ಬಿಜೆಪಿ ಮುಖಂಡ ಪುಟ್ಟಸ್ವಾಮಿ ಅವರ ಮಗ ಬಿ.ಪಿ.ಅರ್ಜುನ್ (29) ಆತ್ಮಹತ್ಯೆ ಮಾಡಿಕೊಂಡವ. ಈತನ ಶವ ಗುರುವಾರ ಸಂಜೆ ಪಿರಿಯಾಪಟ್ಟಣದ ಅರಸನ ಕೆರೆಯ ಸೇತುವೆ ಬಳಿ ಪತ್ತೆಯಾಗಿದೆ.

ಸೆ.15ರಂದು ಈತನ ತಾಯಿ ಎಸ್.ಸುಜಾತ ಹೃದಯಾಘಾತದಿಂದ ನಿಧನರಾಗಿದ್ದರು. ತಾಯಿ ಶವಸಂಸ್ಕಾರವನ್ನು ಬಾರಸೆಯಲ್ಲಿ ಮುಗಿಸಿ ಬಂದ ಅರ್ಜುನ್ ತೀವ್ರವಾಗಿ ಮನನೊಂದಿದ್ದು, ವಾಟ್ಸ್ ಆ್ಯಪ್‌ ಸ್ಟೇಟಸ್ ನಲ್ಲಿ ತಾಯಿಯ ಜೊತೆ ತಾನು ಇಲ್ಲ ಎಂಬಂತೆ ಸ್ಟೇಟಸ್ ಹಾಕಿದ್ದನೆಂದು ಸ್ನೇಹಿತರು ತಿಳಿಸಿದ್ಧಾರೆ.

ತಾಯಿಯ ಸಾವಿನ ದುಃಖ ತಡೆಯದೆ ತೀವ್ರ ಮನನೊಂದಿದ್ದ ಈತ, ಸಂಜೆ ಮನೆಗೆ ಬಾರದೆ ಇರುವುದನ್ನು ಕಂಡು ಸೆ.16ರಂದು ತಂದೆ ಬಿ.ಎಲ್.ಪುಟ್ಟಸ್ವಾಮಿ ಮತ್ತು ಕುಟುಂಬದವರು ಈತನಿಗಾಗಿ ಹುಡುಕಾಟ ನಡೆಸಿದ್ಧಾರೆ. ಈ ವೇಳೆ ಬಿ.ಪಿ.ಅರ್ಜುನ್ ಮೊಬೈಲ್ ಕೆರೆಯ ಬಳಿ ಸಾರ್ವಜನಿಕರಿಗೆ ದೊರಕಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.

ನಂತರ ಸಂಜೆಯ ವೇಳಗೆ ಅರಸನಕೆರೆ ಮುಖ್ಯ ಸೇತುವೆಯ ಬಳಿ ಶವ ತೇಲುತ್ತಿರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಇದು ಬಿ.ಪಿ.ಅರ್ಜುನದ್ದೇ ಶವ ಎಂದು ಗುರುತಿಸಿದ್ಧಾರೆ.

You may also like

Leave a Comment