Home » ಬಾರ್ಯ : ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನಾಭರಣ ಕಳ್ಳತನ

ಬಾರ್ಯ : ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನಾಭರಣ ಕಳ್ಳತನ

by Praveen Chennavara
0 comments

ಉಪ್ಪಿನಂಗಡಿ: ಸರಳಿಕಟ್ಟೆ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಮತ್ತು ಹತ್ತು ಪವನ್ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ.

ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದ್ದು ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಾರ್ಯ ಗ್ರಾಮದ ಸರಳಿಕಟ್ಟೆ ಬೇನಪ್ಪು ನಿವಾಸಿ ಅಬೂಬಕ್ಕರ್ ಮದನಿ ರವರ ಮನೆಗೆ ಕಳ್ಳರು ನುಗ್ಗಿದ್ದು ಇಂದು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ .ಪಿ.ಕುಮಾರ್, ಪುತ್ತೂರು ಗ್ರಾಮಾಂತ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ ನಿರೀಕ್ಷಕ ಕುಮಾರ್ ಸಿ ಕಾಂಬ್ಳೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆದ್ದಾರೆ. ಬೆರಳಚ್ಚು ತಙ್ಞರು ಸ್ಥಳಕ್ಕೆ ಆಗಮಿಸಿದ್ದಾರೆ.

You may also like

Leave a Comment