Home » ಬೆಳ್ತಂಗಡಿ | ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, 1.5 ಕೆ.ಜಿ ಗಾಂಜಾ ವಶ

ಬೆಳ್ತಂಗಡಿ | ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, 1.5 ಕೆ.ಜಿ ಗಾಂಜಾ ವಶ

by ಹೊಸಕನ್ನಡ
0 comments

ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ರಸ್ತೆ ಬದಿ ಸ್ಕೂಟರ್ ಅಡ್ಡ ಹಾಕಿ ಸುಮಾರು 1.5‌ ಕೆ.ಜಿ ಗಾಂಜಾ ಮತ್ತು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಇಂದು ಮದಡ್ಕದಲ್ಲಿ ನಡೆದಿದೆ.

ಮದ್ದಡ್ಕದ ಚಿಲಿಂಬಿ ನಿವಾಸಿ ಮಹಮ್ಮದ್ ರಫೀಕ್ (35) ಹಾಗೂ ನೌಪಾಲ್(25) ಎಂಬವರು ಬಂಧಿತ ಆರೋಪಿಗಳು.

ಸ್ಥಳದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್, ಪಿಎಸ್‌ಐ ನಂದ ಕುಮಾರ್ ಸ್ಥಳದಲ್ಲೇ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment