Home » ನಾಡದೋಣಿ ಮಗುಚಿ ಮೀನುಗಾರಿಕೆಗೆ ತೆರಳಿದ ಇಬ್ಬರು ಮೀನುಗಾರರು ಕಣ್ಮರೆ

ನಾಡದೋಣಿ ಮಗುಚಿ ಮೀನುಗಾರಿಕೆಗೆ ತೆರಳಿದ ಇಬ್ಬರು ಮೀನುಗಾರರು ಕಣ್ಮರೆ

by Praveen Chennavara
0 comments

ಕುಂದಾಪುರ: ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಮರಳಿ ಅಳ್ವೆಕೋಡಿಗೆ ಬರುತ್ತಿದ್ದ ನಾಡ ದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ.

ಚರಣ್ ಖಾರ್ವಿ ಎಂಬವರ ಮಾಲಕತ್ವದ ಜೈ ಗುರೂಜಿ ನಾಡ ದೋಣಿ ತೆರೆಯ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದ್ದು ದೋಣಿಯಲ್ಲಿದ್ದ ಇಬ್ಬರು ಕಣ್ಮರೆಯಾಗಿದ್ದಾರೆ.

ದೋಣಿಯಲ್ಲಿದ್ದ ಇತರೆ ಐದು ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರಿದ್ದಾರೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು,

ಮೀನುಗಾರರು, ಮುಳುಗು ತಜ್ಞರು ಕಣ್ಮರೆಯಾದವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

You may also like

Leave a Comment