Home » ಇರಲಾರದೆ ಇರುವೆ ಬಿಟ್ಟುಕೊಂಡನಂತೆ ! ಎಂಬ ಮಾತಿಗೆ ನಿದರ್ಶನವಾಗಿದೆ ಈ ಘಟನೆ | ತನ್ನಪಾಡಿಗೆ ತಾನಿದ್ದ ಕೋತಿಯನ್ನು ಕೆರಳಿ ಅದರಿಂದ ಕಚ್ಚಿಸಿಕೊಂಡ ಆಟೋ ರಾಜ !!

ಇರಲಾರದೆ ಇರುವೆ ಬಿಟ್ಟುಕೊಂಡನಂತೆ ! ಎಂಬ ಮಾತಿಗೆ ನಿದರ್ಶನವಾಗಿದೆ ಈ ಘಟನೆ | ತನ್ನಪಾಡಿಗೆ ತಾನಿದ್ದ ಕೋತಿಯನ್ನು ಕೆರಳಿ ಅದರಿಂದ ಕಚ್ಚಿಸಿಕೊಂಡ ಆಟೋ ರಾಜ !!

0 comments

ಚಿಕ್ಕಮಗಳೂರು:ಮೂಕ ಪ್ರಾಣಿ ಎಂದು ಅವುಗಳಿಗೆ ಹಿಂಸೆ ಕೊಡುವವರ ಸಂಖ್ಯೆ ಹೆಚ್ಚೇ ಇದೆ ಎನ್ನಬಹುದು. ಅವುಗಳಿಗೆ ಏನು ಅರಿವಾಗುವುದಿಲ್ಲ ಎಂದು ತಮ್ಮ ಮನೋರಂಜನೆಗೆ ತಕ್ಕ ಹಾಗೇ ಅವುಗಳಿಗೆ ಕಿರುಕುಳ ನೀಡುತ್ತಾರೆ. ಇದೇ ರೀತಿ ಕೋತಿಗೆ ಕೀಟಲೆ ಕೊಟ್ಟ ವ್ಯಕ್ತಿಗೆ ಮುಂದೆ ಏನಾಯ್ತು ನೀವೇ ನೋಡಿ.

ಹೌದು ಸಾಮಾನ್ಯ ಪ್ರಾಣಿ ಎಂದು ಅದರ ಕೋಪವನ್ನು ಅರಿಯದ ವ್ಯಕ್ತಿಯೊಬ್ಬ ಕೋತಿಗೆ ಕೀಟಲೆ ನೀಡಿದ್ದ, ಬಳಿಕ ರೊಚ್ಚಿಗೆದ್ದ ಕೋತಿ ವ್ಯಕಿಯನ್ನು ಬೆನ್ನಟ್ಟಿ ಹುಡುಕಿ ಕಚ್ಚಿ ಗಾಯ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಈ ಕೋತಿಯು ಕೊಟ್ಟಿಗೆಹಾರದಲ್ಲಿರುವ ಮೊರಾರ್ಜಿ ದೇಸಾಯಿ ಹಾಸ್ಟೇಲ್‌ಗೆ ಬಂದು ಕುಳಿತಿತ್ತು.ಕೋತಿಯನ್ನು ನೋಡಿರುವ ಆಟೋ ಚಾಲಕ ಜಗದೀಶ್ ಎಂಬವರು ಕೀಟಲೆ ಮಾಡಿದ್ದಾರೆ.ಪರಿಣಾಮವಾಗಿ ಸಿಟ್ಟುಗೊಂಡ ಮಂಗ ಜಗದೀಶ್ ಅವರನ್ನು ಬೆನ್ನಟ್ಟಿ ಬೆನ್ನಟ್ಟಿ ಹಗೆ ತೀರಿಸಿ ಕೈಗೆ ಕಚ್ಚಿದೆ.

ಬೇರೆಯವರೊಂದಿಗೆ ತಲೆಯೇರಿ ಆಟವಾಡುತ್ತಿದ್ದ ಕೋತಿಯು ಅವರಿಗೆ ಏನೂ ಮಾಡದೆ ಕೀಟಲೆ ಮಾಡಿರುವ ಜಗದೀಶ್ ಬೆನ್ನತ್ತಿ ಹೋಗಿ ಹಗೆ ತೀರಿಸಿಕೊಂಡಿದೆ. ಕೋತಿಗೆ ಹೆದರಿ ಜಗದೀಶ್ ಆಟೋ, ಕಾರುಗಳಲ್ಲಿ ಅಡಗಿ ಕುಳಿತುಕೊಂಡರೂ ಹುಡುಕಿಗೊಂಡು ಬಂದ ಕೋತಿಯು ಅವರ ಆಟೋವನ್ನು ಪತ್ತೆ ಹಚ್ಚಿ, ಟಾಪ್ ಹರಿದು ಸೇಡು ತೀರಿಸಿಕೊಂಡಿದೆ. ಅಲ್ಲದೆ ಅವರಿಗೂ ಕಚ್ಚಿ ಹೋಗಿದೆ.

You may also like

Leave a Comment