Home » ಅಮೇರಿಕಾದಲ್ಲಿ ವರ, ಭಾರತದಲ್ಲಿ ವಧು,ಆದರೂ ನಡೆಯಿತು ಮದುವೆ ಎಂಗೇಜ್ಮೆಂಟ್!!ಆನ್ ಲೈನ್ ಎಂಗೇಜ್ಮೆಂಟ್ ಮಾಡಿಕೊಂಡ ಕನ್ನಡದ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ

ಅಮೇರಿಕಾದಲ್ಲಿ ವರ, ಭಾರತದಲ್ಲಿ ವಧು,ಆದರೂ ನಡೆಯಿತು ಮದುವೆ ಎಂಗೇಜ್ಮೆಂಟ್!!ಆನ್ ಲೈನ್ ಎಂಗೇಜ್ಮೆಂಟ್ ಮಾಡಿಕೊಂಡ ಕನ್ನಡದ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ

by ಹೊಸಕನ್ನಡ
0 comments

ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಅತೀ ಹೆಚ್ಚು ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿರುವ ಕೆಲ ಸ್ಪರ್ಧಿಗಳು ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದಂತೂ ನಿಜ. ಈ ಮಧ್ಯೆ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಆನ್ ಲೈನ್ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು ಭಾರೀ ಸುದ್ದಿಯಲ್ಲಿದ್ದಾರೆ.

ಹೌದು. ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ವೈ ಜಯಂತಿ ತಮ್ಮ ಎಂಗೇಜ್ಮೆಂಟ್ ನ್ನು ಆನ್ ಲೈನ್ ನಲ್ಲಿ ಮಾಡಿಕೊಂಡಿದ್ದು, ಅವರ ಕುಟುಂಬ ಕೂಡಾ ಆ ಘಟನೆಗೆ ಸಾಕ್ಷಿಯಾಗಿತ್ತು.

ಅಮೇರಿಕಾದಲ್ಲಿ ವಾಸವಾಗಿರುವ ತಮ್ಮ ಪ್ರಿಯಕರ ಸೂರಜ್ ಜೊತೆಗೆ ಆನ್ ಲೈನ್ ನಲ್ಲೇ ಎಂಗೇಜ್ಮೆಂಟ್ ನಡೆಸಿಕೊಂಡ ಜಯಂತಿ, ಸದ್ಯ ಆ ಕ್ಷಣದ ಫೋಟೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಪುತ್ರಿಯಾಗಿರುವ ವೈ ಜಯಂತಿ,’ಅಮ್ಮಚ್ಚಿ ಎಂಬ ನೆನಪು ‘ಚಿತ್ರದಲ್ಲಿ ನಟಿಸಿದ್ದರು.

You may also like

Leave a Comment