ಸತತ ಏಳು ತಿಂಗಳುಗಳ ಕಾಲ ಬಾಳ್ವೆ ನಡೆಸಿ,ರಾತ್ರಿ ಹಗಲು ಒಟ್ಟಿಗಿದ್ದು, ಜೊತೆಯಾಗಿಯೇ ಮಲಗಿ ಕೊನೆಗೆ ಆತ ಗಂಡಲ್ಲ, ಹೆಣ್ಣು ಎಂದು ತಿಳಿದಾಗ ಆ ಮಹಿಳೆಗೆ ಹೇಗಾಗಬಹುದು?.. ಅಂತಹ ಮತಿಗೆಟ್ಟ ಮಹಿಳೆಯರೂ ಇದ್ದಾರೆಯೇ ಎಂಬ ಪ್ರಶ್ನೆ ಕಾಡುವುದಂತೂ ಸುಳ್ಳಲ್ಲಾ.
ಸದ್ಯ ಅಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು,ಗಂಡಸೆಂದು ಆತನೊಂದಿಗೆ ಏಳು ತಿಂಗಳುಗಳ ಕಾಲ ಬಾಳು ನಡೆಸಿದ 30 ವರ್ಷದ ಮಹಿಳೆಗೆ, ಕೊನೆಗೆ ಅವನಲ್ಲ ಅವಳು ಎಂದು ತಿಳಿದಿದೆ. ಅಷ್ಟಕ್ಕೂ ಆ ಸ್ಟೋರಿ ಶುರುವಾಗಿದ್ದೇ ಒಂದು ಸುಳ್ಳಿನಿಂದ.
ಆಶ್ರಮವೊಂದರ ಸೆಕ್ಯೂರಿಟಿ ಯಾಗಿ ಕೆಲಸ ನಿರ್ವಹಿಸುತ್ತಿದ್ದ 30 ವರ್ಷದ ಮಹಿಳೆ ಅದಾಗಲೇ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದಳು. ಇಬ್ಬರು ಮಕ್ಕಳನ್ನು ಸಾಕಲು ತಾನೇ ಕಷ್ಟ ಪಡುತ್ತಿದ್ದಳು. ಇದೇ ಆಶ್ರಮಕ್ಕೆ ವಿಜೇತ ಎನ್ನುವ ತನ್ನ ಹೆಸರನ್ನು ವಿಕಾಸ್ ಎಂದು ಬದಲಿಸಿಕೊಂಡು ಬರುತ್ತಾಳೆ.ಸ್ವರ, ಮಾತನಾಡುವ ಶೈಲಿ, ಕೂದಲು ಎಲ್ಲವೂ ಗಂಡಸರಂತೆಯೇ ಇದ್ದು, ಮಹಿಳೆಯರ ಆಶ್ರಮವಾಗಿದ್ದರಿಂದ ಅಲ್ಲಿಗೆ ಪುರುಷರ ಪ್ರವೇಶವಿಲ್ಲ.ಆದರೆ, ಮೊದಲೇ ಗಂಡನನ್ನು ಕಳೆದುಕೊಂಡಿದ್ದ ಆ ಮಹಿಳೆ ತನಗೊಂದು ಜೋಡಿ ಸಿಕ್ಕಿತು ಎಂದು ಒಳಬಿಟ್ಟುಕೊಳ್ಳುತ್ತಾಳೆ.
ಆ ಬಳಿಕ ಮಹಿಳೆಯ ಒಡವೆ, ಹಣ ಎಲ್ಲದಕ್ಕೂ ಆಸೆ ಪಟ್ಟ ವಿಕಾಸ್ ಆ ಮಹಿಳೆಯನ್ನು ಮದುವೆ ಕೂಡಾ ಆಗುತ್ತಾನೆ.ಆ ಬಳಿಕ ಇದ್ದದ್ದೇ, ಇಬ್ಬರೂ ರಾತ್ರಿ ಒಟ್ಟಿಗೇ ಮಲಗುತ್ತಾರೆ. ಗಂಡ ಹೆಂಡತಿಯರಂತೆಯೇ ಅನ್ಯೋನ್ಯವಾಗಿ ಇರುತ್ತಾರೆ.ಒಂದು ದಿನ ಇದ್ದಕ್ಕಿದ್ದಂತೆಯೇ ವಿಕಾಸ್ ಆ ಮಹಿಳೆಯ ಒಡವೆ, ಹಣವನ್ನೆಲ್ಲ ದೋಚಿ ಪರಾರಿಯಾಗುತ್ತಾನೆ. ಗಾಬರಿಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡುತ್ತಾಳೆ.
ಇಲ್ಲಿ ಅಸಲಿಯತ್ತು ಬಯಲಾಗುತ್ತದೆ. ಪೊಲೀಸರು ವಿಕಾಸ್ ಅಲ್ಲದ ವಿಜೇತಾಳನ್ನು ಎಳೆದುಕೊಂಡು ಬಂದು ವಿಚಾರಣೆ ನಡೆಸಿದಾಗ ‘ನಾನು ಅವನಲ್ಲ ಅವಳು’ಎಂಬ ಸತ್ಯ ಬಯಲಾಗುತ್ತದೆ. ಅಷ್ಟಕ್ಕೂ ಆ ಮಹಿಳೆಗೂ ಅಸಲಿ ವಿಷಯ ತಿಳಿದಿದ್ದೇ ಆಗ. ಅವರಿಬ್ಬರೂ ಏಳು ತಿಂಗಳಿನಿಂದ ಒಟ್ಟಿಗೇ ಮಲಗಿದ್ದರು,ಜೊತೆಯಲ್ಲಿದ್ದರು ಆದರೆ ಒಂದು ದಿನ ಕೂಡಾ ದೈಹಿಕ ಸಂಪರ್ಕ ಬೆಳೆಸಿರಲಿಲ್ಲ, ಏನಾದರೂ ಕಾರಣ ಹೇಳಿ ವಿಜೇತ ತಪ್ಪಿಸುತ್ತಿದ್ದಳು ಎಂದು ಮಹಿಳೆ ಹೇಳಿದ್ದಾಳೆ. ಒಂದು ವೇಳೆ ದೈಹಿಕ ಸಂಪರ್ಕ ಬೆಳೆಸಿದ್ದರೆ,ಅವನಲ್ಲದ ಅವಳು ಎಂಬ ಸತ್ಯ ಆ ಮಹಿಳೆಗೆ ಅಂದೇ ತಿಳಿದುಬಿಡುತ್ತಿತ್ತೇನೋ.ಸದ್ಯ ಪ್ರಕರಣ ಪೊಲೀಸರ ಮುಂದಿದೆ.
