Home » ಪರೀಕ್ಷೆಯ ಭಯದಿಂದ ನೇಣಿಗೆ ಶರಣಾದ ಕಾಲೇಜು ವಿದ್ಯಾರ್ಥಿ

ಪರೀಕ್ಷೆಯ ಭಯದಿಂದ ನೇಣಿಗೆ ಶರಣಾದ ಕಾಲೇಜು ವಿದ್ಯಾರ್ಥಿ

0 comments

ಕಾಲೇಜು ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರು ಗ್ರಾಮದ ಬಾವಡಿ ಎಂಬಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿ ಬಾವಡಿಯ ಚಂದ್ರ ನಾಯ್ಕ ಎಂಬವರ ಮಗ ಸುಪ್ರೀತ್ (22) ಎಂಬುವವರು ಎಂದು ಗುರುತಿಸಲಾಗಿದೆ.

ಕುಂದಾಫುರ ವರದರಾಜ ಎಂ.ಶೆಟ್ಟಿ ಸರಕಾರಿ ಕಾಲೇಜಿನಲ್ಲಿ ಬಿಕಾಂ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ ಸುಪ್ರೀತ್, ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.

ಕಾಲೇಜಿನ ಪರೀಕ್ಷೆಯ ಬಗ್ಗೆ ಭಯಭೀತರಾಗಿದ್ದ ವಿದ್ಯಾರ್ಥಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ, ತಾನು ಮಲಗುವ ಕೋಣೆಯಲ್ಲಿಯೇ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಯ ಪ್ರಕಾರ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment