Home » ಎಡಮಂಗಲ : ಅಕೇಶಿಯ ಮರದ ಕಂಬಗಳ ಅಕ್ರಮ ಸಾಗಾಟ ಪತ್ತೆ

ಎಡಮಂಗಲ : ಅಕೇಶಿಯ ಮರದ ಕಂಬಗಳ ಅಕ್ರಮ ಸಾಗಾಟ ಪತ್ತೆ

by Praveen Chennavara
0 comments

ಕಡಬ: ಅಕೇಶಿಯ ಮರದ ಕಂಬಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪಂಜ ಅರಣ್ಯ ಇಲಾಖೆಯವರು ಅಧಿಕಾರಿಗಳು ಪತ್ತೆ ಹಚ್ಚಿ ವಾಹನ ಸಹಿತ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಗುರುವಾರ ರಾತ್ರಿ ಅರಣ್ಯ ಇಲಾಖೆಯವರು ಗಸ್ತಿನಲ್ಲಿದ್ದಾಗ ಪ್ರಕರಣ ಬೆಳಕಿಗೆ ಬಂದಿದ್ದು
ಕಡಬ ತಾಲೂಕು ಎಡಮಂಗಲ ಗ್ರಾಮದ ಪಟ್ಲದ ಮೂಲೆ ಎಂಬಲ್ಲಿ ರೈಲ್ವೆ ಕೇಳಸೇತುವೆ ಬಳಿ ರಸ್ತೆಯಲ್ಲಿ ಮಹಿಂದ್ರಾ ಬೊಲೆರೋ ಪಿಕಪ್ ವಾಹನ ದಲ್ಲಿ ಅಕೇಶಿಯ ಮರದ 60 ಕಂಬಗಳ ಅಕ್ರಮ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಮಲ್ಲ, ಕುಶಾಲಪ್ಪ ಗೌಡ, ವಿನಯಚಂದ್ರ ರವರನ್ನು ಹಾಗೂ ಸೊತ್ತು ಸಮೇತ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಎಡಮಂಗಲ ಶಾಖಾ ಉಪವಲಯ ಅರಣ್ಯಧಿಕಾರಿ ಯಶೋಧರ. ಕೆ ಮತ್ತು ಸಿಬ್ಬಂದಿ ಯವರು ಹಾಗು ಪಂಜ ವಲಯದ ರಾತ್ರಿ ಗಸ್ತಿನ ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

You may also like

Leave a Comment