Home » ಸುಳ್ಯ : ಅಧಿಕಾರಿಯ ಕಿಸೆಯಿಂದ ಹಣ ಎಳೆದೊಯ್ದ ಮಂಗಳಮುಖಿ‌ | ಮಂಗಳಮುಖಿಯರ ವರ್ತನೆಗೆ ಬೇಸತ್ತಿದ್ದಾರೆ ಸಾರ್ವಜನಿಕರು

ಸುಳ್ಯ : ಅಧಿಕಾರಿಯ ಕಿಸೆಯಿಂದ ಹಣ ಎಳೆದೊಯ್ದ ಮಂಗಳಮುಖಿ‌ | ಮಂಗಳಮುಖಿಯರ ವರ್ತನೆಗೆ ಬೇಸತ್ತಿದ್ದಾರೆ ಸಾರ್ವಜನಿಕರು

0 comments

ಸುಳ್ಯ ಬಸ್ ನಿಲ್ದಾಣದಲ್ಲಿ ಸುಳ್ಯದ ಅಧಿಕಾರಿಯೊಬ್ಬರ ಕಿಸೆಯಿಂದ ಮಂಗಳಮುಖಿಯೊಬ್ಬಾಕೆ ಹಣವನ್ನು ಎಳೆದೊಯ್ದ ಘಟನೆ ವರದಿಯಾಗಿದೆ.

ಸೆ.22 ರಂದು ರಾತ್ರಿ 9.15 ರ ಸುಮಾರಿಗೆ ಸುಳ್ಯದ ಖಜಾನಾಧಿಕಾರಿಯವರು ಪುತ್ತೂರಿಗೆ ಹೋಗಲೆಂದು ಸುಳ್ಯದ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಕುಳಿತಿದ್ದರು.

ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ತಂದು ಸುಳ್ಯದಲ್ಲಿರಿಸಿ ಅವರು ಪುತ್ತೂರಿಗೆ ತೆರಳುವ ಬಸ್‌ನಲ್ಲಿ ಕುಳಿತಿದ್ದರು.ಆ ವೇಳೆಗೆ ಬಸ್ಸಿನೊಳಗೆ ಬಂದ ಮಂಗಳಮುಖಿಯೊಬ್ಬಾಕೆ ಹಣಕ್ಕಾಗಿ ಬೇಡಿಕೆ ಮುಂದಿಟ್ಟಾಗ ಇವರು ಹಣ ಕೊಡಲಿಲ್ಲ ಎನ್ನಲಾಗಿದೆ.

ಅಲ್ಲಿಂದ ಹೋದಂತೆ ನಟಿಸಿದ ಆಕೆ ಸ್ವಲ್ಪ ಹೊತ್ತಲ್ಲಿ ಹಿಂದಿನಿಂದ ಬಂದು ಖಜಾನಾಧಿಕಾರಿಯವರ ಕಿಸೆಗೆ ಕೈ ಹಾಕಿ ಕಿಸೆಯಲ್ಲಿದ್ದ ಒಂದೂವರೆ ಸಾವಿರ ರೂಪಾಯಿಗಳನ್ನು ಎಳೆದುಕೊಂಡಳು. ಆಕೆ ಕಿಸೆಗೆ ಕೈ ಹಾಕಿ ಹಣವನ್ನು ಎಳೆಯುವಾಗ ಖಜಾನಾಧಿಕಾರಿಯವರು ಆಕೆಯ ಕೈಯನ್ನು ಹಿಡಿದುಕೊಂಡರೂ, ಆಕೆ ಕೊಸರಿಕೊಂಡು ಕೈಯನ್ನು ಎಳೆದುಕೊಂಡು ಹಣದೊಂದಿಗೆ ಪರಾರಿಯಾದಳು.

ಆ ವೇಳೆಗೆ ಬಸ್ಸಲ್ಲಿ ಖಜಾನಾಧಿಕಾರಿ ಒಬ್ಬರೇ ಇದ್ದರು. ಇತರ ಪ್ರಯಾಣಿಕರಾರೂ ಇರಲಿಲ್ಲ. ಖಜಾನಾಧಿಕಾರಿಯವರು ಪೊಲೀಸರಿಗೆ ವಿಷಯ ತಿಳಿಸಿ ಪೋಲಿಸರು ಬಂದು ಹುಡುಕಾಡಿದರೂ ಸಿ.ಸಿ. ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆದರೆ ಮಂಗಳಮುಖಿ ಯಾರೆಂದು ಪತ್ತೆ ಮಾಡಲು ಸಾಧ್ಯವಾಗಲಿಲ್ಲವೆಂದು ತಿಳಿದು ಬಂದಿದೆ.

ಮಂಗಳ ಮುಖಿಯರ ಇಂತಹ ವರ್ತನೆ ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿದೆ.

You may also like

Leave a Comment