Home » ತಿಂಡಿಯ ಆಮಿಷವೊಡ್ಡಿ ಬಾಲಕಿಗೆ ಲೈಂಗಿಕ ದೌರ್ಜನ್ಯ | ಆರೋಪಿ‌ ಬಂಧನ

ತಿಂಡಿಯ ಆಮಿಷವೊಡ್ಡಿ ಬಾಲಕಿಗೆ ಲೈಂಗಿಕ ದೌರ್ಜನ್ಯ | ಆರೋಪಿ‌ ಬಂಧನ

by Praveen Chennavara
0 comments

ತಿಂಡಿ, ಹಣದ ಆಮಿಷವೊಡ್ಡಿ ಧಾರವಾಡ ಜಿಲ್ಲೆಯ ದಡ್ಡಿ ಕಮಲಾಪೂರದ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಧಾರವಾಡ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ಫಕ್ಕೀರಪ್ಪ ತಳವಾರ (25) ಬಂಧಿತ ಆರೋಪಿ. ಈತ ಬಾಲಕಿಗೆ ಎಗ್ರೈಸ್, ಗೋಬಿ ಮಂಚೂರಿಯಂತಹ ತಿಂಡಿ ಹಾಗೂ ಹಣದ ಆಸೆ ತೋರಿಸಿ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಲ್ಲದೇ ಹಣಕ್ಕಾಗಿ ಬಿಕ್ಷಾಟನೆ ತೊಡಗಿದ್ದ ಬಾಲಕಿಯ ಮೇಲೆ ದೌರ್ಜನ್ಯ ಎಸಗುವಾಗ ಸಿಕ್ಕು ಬಿದ್ದು, ಧರ್ಮದೇಟು ಸಿಕ್ಕಿತ್ತು.

ಈ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲಕಿಯನ್ನು ಪತ್ತೆ ಹಚ್ಚಿ ಆಪ್ತ ಸಮಾಲೋಚನೆ ಕೈಗೊಂಡಾಗ, ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆಗಿದ್ದು ಬೆಳಕಿಗೆ ಬಂದಿತ್ತು.

ಈ ಕುರಿತಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ|ಕಮಲಾ ಬಲೂರ ಉಪನಗರ ಠಾಣೆಗೆ ದೂರು ನೀಡಿ, ಲೈಂಗಿಕ ದೌರ್ಜನ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ಈ ದೂರಿನ ಅನ್ವಯ ಧಾರವಾಡ ಉಪನಗರ ಠಾಣೆ ಪೊಲೀಸರು, ಮಾಹಿ ಕಲೆ ಹಾಕಿ ಗುರುವಾರವೇ ಅಣ್ಣಿಗೇರಿಯ ಹಳ್ಳಿಕೇರಿಗೆ ಭೇಟಿ ನೀಡಿ, ಯುವಕ ಶರಣಪ್ಪನನ್ನು ಬಂಧಿಸಿದ್ದಾರೆ. ಇದಲ್ಲದೇ ಆರೋಪಿಯ ವಿರುದ್ದ ಪೋಸ್ಕೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

You may also like

Leave a Comment