Home » ವಾಟ್ಸಾಪ್‌ನಲ್ಲಿ ಆತ್ಮಹತ್ಯೆ ಮೆಸೆಜ್ ಕಳಿಸಿ ಜಿಲ್ಲಾಧಿಕಾರಿ ಸಿಬಂದಿ ನಾಪತ್ತೆ | ಪತ್ತೆಗಾಗಿ ಹುಡುಕಾಟ

ವಾಟ್ಸಾಪ್‌ನಲ್ಲಿ ಆತ್ಮಹತ್ಯೆ ಮೆಸೆಜ್ ಕಳಿಸಿ ಜಿಲ್ಲಾಧಿಕಾರಿ ಸಿಬಂದಿ ನಾಪತ್ತೆ | ಪತ್ತೆಗಾಗಿ ಹುಡುಕಾಟ

by Praveen Chennavara
0 comments

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಕಳಿಸಿರುವುದು ಜಿಲ್ಲಾಧಿಕಾರಿ ಕಚೇರಿ ಮತ್ತು ಕಂದಾಯ ಇಲಾಖೆ ನೌಕರರ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಿರಿರಾಜ್(39) ಅವರು ನಾಪತ್ತೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆಯಿಂದಲೇ ಅವರ ಹುಡುಕಾಟ ನಡೆಯುತ್ತಿದೆ.

ಗಿರಿರಾಜ್ ಅವರು ಬೆಳಗಿನ ಜಾವ ಮನೆಯಿಂದ ಹೊರಟಿದ್ದಾರೆ. ತಮ್ಮ ವಾಹನವನ್ನು ಕೂಡ ಕೊಂಡೊಯ್ದಿಲ್ಲ ಎಂದು ತಿಳಿದು ಬಂದಿದೆ. ಬಹು ಹೊತ್ತಾದರೂ ಗಿರಿರಾಜ್ ಮನೆಗೆ ಹಿಂತಿರುಗದ ಹಿನ್ನಲೆಯಲ್ಲಿ ಮನೆಯವರು ಆತಂಕಕ್ಕೀಡಾಗಿದ್ದಾರೆ. ನೆರೆಹೊರೆಯವರನ್ನು, ಸ್ನೇಹಿತರನ್ನು ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಿರಿರಾಜ್ ಅವರು ಜಿಲ್ಲಾಧಿಕಾರಿ ಕಛೇರಿ ಸಿಬ್ಬಂದಿಗಳ ವಾಟ್ಸ್ ಆ್ಯಪ್ ಗ್ರೂಪ್‌ಗೆ ಮೆಸೇಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಛೇರಿಯ ಕಾರ್ಯದ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಗಿರಿರಾಜ್ ಅವರ ವಾಟ್ಸ್ ಆಪ್ ಸಂದೇಶದಿಂದ ವಿಚಲಿತರಾದ ಅವರ ಕುಟುಂಬಸ್ಥರು ಹಾಗೂ ಜಿಲ್ಲಾಧಿಕಾರಿ ಕಚೇರಿಯ ಇತರೆ ಸಿಬ್ಬಂದಿಗಳು ಗಿರಿರಾಜ್‌ಗಾಗಿ ಹುಡಕಾಟ ಆರಂಭಿಸಿದ್ದಾರೆ.

You may also like

Leave a Comment