Home » ಹಾಸನ : ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ,ಎರಡು ಬೋಗಿಗಳು ಬೆಂಕಿಗಾಹುತಿ

ಹಾಸನ : ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ,ಎರಡು ಬೋಗಿಗಳು ಬೆಂಕಿಗಾಹುತಿ

by Praveen Chennavara
0 comments

ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಎರಡಕ್ಕೂ ಹೆಚ್ಚು ಬೋಗಿಗಳು ಸುಟ್ಟು ಕರಕಲಾದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಅರಸೀಕೆರೆ ರೈಲ್ವೆ ಜಂಕ್ಷನ್ ಸಮೀಪದ ಅಂಚೆಕೊಪ್ಪಲು ಬಳಿ ಈ ಅವಘಡ ಸಂಭವಿಸಿದೆ. ಬೆಂಗಳೂರಿನಿಂದ ವಾಪಸ್ಸಾಗಿ ಎರಡು ದಿನಗಳಿಂದ ಅರಸೀಕೆರೆ ಜಂಕ್ಷನ್‌ನಲ್ಲಿ ರೈಲು ನಿಂತಿತ್ತು.

ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಎರಡು ಬೋಗಿಗಳ ಆಸನಗಳು ಸಂಪೂರ್ಣವಾಗಿ ಸುಟ್ಟಿವೆ.

ಘಟನಾ ಸ್ಥಳದ ಸಮೀಪದಲ್ಲಿಯೇ ಇಂಧನ ಶೇಖರಣಾ ಘಟಕವಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಗ್ನಿ ಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

You may also like

Leave a Comment