Home » ನೀರು ಪಾಲಾಗುತ್ತಿದ್ದ 4 ಮಕ್ಕಳ ಸಹಿತ 6 ಮಂದಿಯ ರಕ್ಷಿಸಿದ ಲೈಫ್ ಗಾರ್ಡ್-ಟೂರಿಸ್ಟ್ ಮಿತ್ರ

ನೀರು ಪಾಲಾಗುತ್ತಿದ್ದ 4 ಮಕ್ಕಳ ಸಹಿತ 6 ಮಂದಿಯ ರಕ್ಷಿಸಿದ ಲೈಫ್ ಗಾರ್ಡ್-ಟೂರಿಸ್ಟ್ ಮಿತ್ರ

by Praveen Chennavara
0 comments

ಪ್ರವಾಸಕ್ಕೆ ಬಂದು ಸಮುದ್ರ ಪಾಲಾಗುತ್ತಿದ್ದವರನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ರಕ್ಷಿಸಿರುವ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಪ್ರವಾಸಕ್ಕೆ ಆಗಮಿಸಿದ್ದ 13 ಮಂದಿ ಪೈಕಿ ಒಂದೇ ಕುಟುಂಬದ 4 ಮಕ್ಕಳು ಸೇರಿದಂತೆ ಒಟ್ಟು 6 ಜನರನ್ನು ರಕ್ಷಿಸಲಾಗಿದೆ.

ವಾಟರ್ ಸ್ಪೋರ್ಟ್ಸ್ ಮುಗಿಸಿಕೊಂಡು ಮಕ್ಕಳು ಕಡಲ ತೀರದಲ್ಲಿ ಆಟವಾಡುತ್ತಿದ್ದರು. ಈ ವೇಳೆ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಪಾಲಕರಿಗೆ ಮಕ್ಕಳನ್ನು ನೀರಿನಲ್ಲಿ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು.

ಆದರೂ ಮಕ್ಕಳು ಆಡುತ್ತಾ ಮುಂದೆ ಸಾಗಿದ್ದು, ದಿಢೀರ್ ಆಗಿ ಬಂದ ಅಲೆಯಿಂದ ಎಲ್ಲರೂ ಕೊಚ್ಚಿ ಹೋಗಿದ್ದಾರೆ. ತಕ್ಷಣ ಕುಟುಂಬಸ್ಥರು ಕೂಗಿಕೊಂಡಿದ್ದಾರೆ. ರಕ್ಷಣೆಗೆ ಧಾವಿಸಿದ ಲೈಫ್‌ಗಾರ್ಡ್, ಟೂರಿಸ್ಟ್ ಮಿತ್ರ ಸಿಬ್ಬಂದಿ 6 ಜನರನ್ನು ರಕ್ಷಣೆ ಮಾಡಿದ್ದಾರೆ.

ಮಕ್ಕಳು ನೀರು ಕುಡಿದಿದ್ದರಿಂದ ಪ್ರಜ್ಞೆ ತಪ್ಪಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

You may also like

Leave a Comment