Home » ಪುತ್ತೂರು:ಅಣಬೆ ಪದಾರ್ಥ ತಿಂದು 12 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು!! ಅಸ್ವಸ್ಥಗೊಂಡವರೆಲ್ಲಾ ಒಂದೇ ಕುಟುಂಬದವರಾಗಿದ್ದು, ಇಬ್ಬರ ಸ್ಥಿತಿ ಗಂಭೀರ

ಪುತ್ತೂರು:ಅಣಬೆ ಪದಾರ್ಥ ತಿಂದು 12 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು!! ಅಸ್ವಸ್ಥಗೊಂಡವರೆಲ್ಲಾ ಒಂದೇ ಕುಟುಂಬದವರಾಗಿದ್ದು, ಇಬ್ಬರ ಸ್ಥಿತಿ ಗಂಭೀರ

0 comments

ಇತ್ತೀಚೆಗೆ ಕೋಳಿ ಪದಾರ್ಥ ತಿಂದು ಓರ್ವ ಮೃತಟ್ಟು ಹಲವರು ಅಸ್ವಸ್ಥಗೊಂಡ ಘಟನೆ ಮಾಸುವ ಮುನ್ನವೇ,ಪುತ್ತೂರು ತಾಲೂಕಿನ ಪಡ್ನೂರು ಎಂಬಲ್ಲಿ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥಗೊಂಡ ಘಟನೆ ಇಂದು ನಡೆದಿದ್ದು,ಅಸ್ವಸ್ಥರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಲ್ಲಿ ಇಂದು ಮಧ್ಯಾಹ್ನ ಊಟದ ಜೊತೆಗೆ ಅಣಬೆ ಪದಾರ್ಥ ಮಾಡಿದ್ದು, ಎಲ್ಲರೂ ಅಣಬೆ ಪದಾರ್ಥ ಸೇವಿಸಿದ್ದರು. ಕೆಲ ಹೊತ್ತಿನಲ್ಲೇ ಹಲವರು ಅಸ್ವಸ್ಥ ಗೊಂಡಿದ್ದು,ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಅಸ್ವಸ್ಥಗೊಂಡವರನ್ನು ರಾಘವ(42), ಲತಾ(35), ತ್ರಿಶಾ(10), ಕೇಶವ(45), ಅರ್ಚನಾ(10), ಹೊನ್ನಮ್ಮ(60), ಬೇಬಿ(35) ಎನ್ನಲಾಗಿದ್ದು,ಹಾಗೂ ಇತರರ ಮಾಹಿತಿ ನಿರೀಕ್ಷಿಸಲಾಗಿದೆ.

You may also like

Leave a Comment