Home » ಸವಣೂರು : ಪುಣ್ಚಪ್ಪಾಡಿಯಲ್ಲಿ ಕೆರೆಗೆ ಬಿದ್ದ ಮೊಸಳೆ | ಕುಮಾರಧಾರ ನದಿಗೆ ಸುರಕ್ಷಿತವಾಗಿ ಬಿಟ್ಟ ಅರಣ್ಯ ಇಲಾಖೆ

ಸವಣೂರು : ಪುಣ್ಚಪ್ಪಾಡಿಯಲ್ಲಿ ಕೆರೆಗೆ ಬಿದ್ದ ಮೊಸಳೆ | ಕುಮಾರಧಾರ ನದಿಗೆ ಸುರಕ್ಷಿತವಾಗಿ ಬಿಟ್ಟ ಅರಣ್ಯ ಇಲಾಖೆ

by Praveen Chennavara
0 comments

ಸವಣೂರು : ಪುಣ್ಚಪಾಡಿ ಗ್ರಾಮದ ಕುಮಾರಮಂಗಲ ನಿವಾಸಿ ಚನಿಯ ಎಂಬವರ ತೋಟದಲ್ಲಿರುವ ಕೆರೆಗೆ ಮೊಸಳೆ ಬಿದ್ದಿರುವ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸುರಕ್ಷಿತವಾಗಿ ಹಿಡಿದು ಕುಮಾರಧಾರ ನದಿಗೆ ಬಿಡಲಾಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಮತ್ತು ವಲಯ ಅರಣ್ಯಾಧಿಕಾರಿಗಳಾದ ಸುಬ್ಬಯ್ಯ ನಾಯ್ಕ ಅವರ ಮಾರ್ಗದರ್ಶನದಂತೆ ಅರಣ್ಯ ರಕ್ಷಕರಾದ ಸತ್ಯನ್‌ ಡಿ ಜಿ,ಗಿರೀಶ್ ನವೀನ್ ಮತ್ತು ಉರಗತಜ್ಞ ತೇಜಸ್ ,ಪುನೀತ್,ಸಚಿನ ರವರು ಮೊಸಳೆಯನ್ನು ಸೆರೆಹಿಡಿದು ಸುರಕ್ಷಿತವಾಗಿ ಕುಮಾರಧಾರ ನದಿಗೆ ಬಿಟ್ಟರು.

You may also like

Leave a Comment