Home » ಮಂಗಳೂರು: ಹಾಡಹಗಲೇ ಹಿಂದೂ ಯುವಕನ ಕೊಲೆಗೆ ಯತ್ನಿಸಿದ ಅನ್ಯಕೋಮಿನ ಯುವಕರ ತಂಡ!!ಪ್ರಾಣ ರಕ್ಷಿಸಿಕೊಳ್ಳಲು ಅಂಗಡಿಯೊಂದಕ್ಕೆ ನುಗ್ಗಿದ ಯುವಕ

ಮಂಗಳೂರು: ಹಾಡಹಗಲೇ ಹಿಂದೂ ಯುವಕನ ಕೊಲೆಗೆ ಯತ್ನಿಸಿದ ಅನ್ಯಕೋಮಿನ ಯುವಕರ ತಂಡ!!ಪ್ರಾಣ ರಕ್ಷಿಸಿಕೊಳ್ಳಲು ಅಂಗಡಿಯೊಂದಕ್ಕೆ ನುಗ್ಗಿದ ಯುವಕ

1 comment

ಅನ್ಯಕೋಮಿನ ಯುವಕರ ತಂಡವೊಂದು ಹಿಂದೂ ಯುವಕನೊಬ್ಬನನ್ನು ಹಾಡಹಗಲೇ ಹಲ್ಲೆಗೈಯ್ಯಲು ಯತ್ನಿಸಿದ ಮಂಗಳೂರು ಹೊರವಲಯದ ಮೂಡುಶೆಡ್ಡೆ ಜಂಕ್ಷನ್ ನಲ್ಲಿ ನಡೆದಿದ್ದು, ಯುವಕರು ಹಿಂದೂ ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳನ್ನು ಇಮ್ರಾನ್, ರಿಯಾನ್, ರಮೀಝ್, ಮುಸ್ತಫಾ, ನಿಜಾಮ್, ಶಾರುಖ್, ಜಾವಿದ್, ರಾಯಿಫ್, ಮತ್ತು ಇತರ ನಾಲ್ವರೆಂದು ಗುರುತಿಸಲಾಗಿದೆ.

ಘಟನೆ ವಿವರ:ಹಿಂದೂ ಕಾರ್ಯಕರ್ತ ನನ್ನು ಮೂಡುಶೆಡ್ಡೆಯ ಮಸೀದಿ ಬಳಿಯಿಂದ ಹಲ್ಲೆಮಾಡಲೆಂದು ತಲವಾರು, ಮತ್ತಿತರ ಆಯುಧಗಳನ್ನು ಹಿಡಿದುಕೊಂಡು ಅಟ್ಟಾಡಿಸಿದ್ದಾರೆ. ಈ ವೇಳೆ ಯುವಕ ಪ್ರಾಣ ರಕ್ಷಣೆಗೆ ಮೂಡುಶೆಡ್ಡೆಯ ಅಂಗಡಿಯೊಂದಕ್ಕೆ ನುಗ್ಗಿದ್ದು, ಆರೋಪಿಗಳು ಅಂಗಡಿಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ಯುವತಿಯ ಬಟ್ಟೆ ಎಳೆದಾಡಿ, ಕಿರುಕುಳ ನೀಡಿದ್ದು, ಆಕೆಯ ಮೇಲೂ ಹಲ್ಲೆಗೆ ಮುಂದಾದಾಗ ಯುವತಿ ಆರೋಪಿಗಳ ವೀಡಿಯೋ ಚಿತ್ರೀಕರಿಸಿದ್ದಾಳೆ. ಆರೋಪಿಗಳ ಬೆದರಿಕೆ, ಹಾಗೂ ಹಾಡಹಗಲೇ ನಡೆದ ಕೊಲೆಯತ್ನ ದ ತುಣುಕು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

You may also like

Leave a Comment