Home » ಪುತ್ತೂರು : ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತೆಗೆ ಗರ್ಭದಾನ ,ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ | ಎಸ್ಪಿಗೆ ದೂರು

ಪುತ್ತೂರು : ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತೆಗೆ ಗರ್ಭದಾನ ,ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ | ಎಸ್ಪಿಗೆ ದೂರು

by Praveen Chennavara
0 comments

ಪುತ್ತೂರು: ಅಪ್ರಾಪ್ತ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

ಈ ಬಗ್ಗೆ ಅಪ್ರಾಪ್ತ ಬಾಲಕಿಯು ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರು ನೀಡಿದ್ದು, ದೂರಿನಲ್ಲಿ “ನಾನು ಕಳೆದ ಒಂದು ವರ್ಷ ಮೂರು ತಿಂಗಳಿನಿಂದ ಸುಳ್ಯ ಪದವು ಸಮೀಪದ ನಾರಾಯಣ ರೈ ಎಂಬವರ ತೋಟದ ಕೆಲಸಕ್ಕೆ ತೆರಳುತ್ತಿದ್ದು, ಕೆಲಸಕ್ಕೆ ಸೇರಿದ ಎರಡು ತಿಂಗಳ ನಂತರ ಅವರು ನನ್ನಲ್ಲಿ ಅನೈತಿಕ ಸಂಬಂಧದ ಬಗ್ಗೆ ನನ್ನಲ್ಲಿ ಬಗ್ಗೆ ಮಾತಾನಾಡಿದ್ದು, ನಾನು ನಿರಾಕರಿಸಿ ಈ ಬಗ್ಗೆ ಮನೆಯವರಿಗೆ ತಿಳಿಸುವುದಾಗಿ ಹೇಳಿದಾಗ ನೀನು ಮನೆಯವರಿಗೆ ತಿಳಿಸಿದರೆ ನಿನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ”.

“ನಾನು ಒಪ್ಪದಿದ್ದಾಗ ಬಲವಂತವಾಗಿ ನನ್ನನ್ನು ಅವರ ತೋಟದಲ್ಲಿ ಬಲಾತ್ಕಾರ ಮಾಡಿ, ನಂತರ ಈ ವಿಷಯವನ್ನು ಯಾರಿಗೂ ಹೇಳದಂತೆ ಕೊರಗಜ್ಜನ ಪ್ರಮಾಣವನ್ನು ಮಾಡಿಸಿಕೊಂಡಿದ್ದು, ಪ್ರತಿ ದಿನ ನನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದು, 4 ತಿಂಗಳ ಗರ್ಭವತಿಯಾದ ನಂತರವೂ ಬೆದರಿಸಿ ದಿನಂಪ್ರತಿ ಅತ್ಯಾಚಾರ ಮಾಡಿರುತ್ತಾರೆ.

ಅಷ್ಟೇ ಅಲ್ಲದೇ ನನಗೆ ಒತ್ತಾಯ ಪೂರ್ವಕವಾಗಿ ಮೊಬೈಲ್ ಫೋನ್ ಅನ್ನು ತೆಗೆದು ಕೊಟ್ಟಿದ್ದು, ನಾನು ಒಂದು ತಿಂಗಳ ಗರ್ಭವತಿಯಾದಾಗಲೇ ಈ ವಿಷಯವನ್ನು ಅವರಲ್ಲಿ ಹೇಳಿದ್ದು, ಮರುದಿನ ಮಾತ್ರೆ ತಂದುಕೊಟ್ಟಿದ್ದು, ಆದರೇ ನಾನು ಆ ಮಾತ್ರೆಯನ್ನು ತೆಗೆದುಕೊಂಡಿಲ್ಲ. 4 ತಿಂಗಳ ಗರ್ಭಿಣಿಯಾದ ನಂತರ ಕೆಲಸಕ್ಕೆ ಹೋಗಲು ಆಗದೇ ಮನೆಯಲ್ಲೇ ಇದ್ದೆ, ಆಗ ನಾರಾಯಣ ರೈ ಯವರು ಪದೇ ಪದೇ ಫೋನ್ ಮಾಡಿ ಬರಲು ಹೇಳುತ್ತಿದ್ದರು. ನಾನು ಹೋಗದೇ ಇದ್ದಾಗ ನನಗೆ ಬಯ್ಯುತ್ತಿದ್ದರು”.

ಈ ಕುರಿತು ನಾನು ಈಗಾಗಲೇ ದೂರು ನೀಡಿದ್ದು, ಆದರೇ ಪೊಲೀಸರು ಈ ಪ್ರಕರಣವನ್ನು ತಿರುಚುವ ಪ್ರಯತ್ನವನ್ನು ಮಾಡುತ್ತಿದ್ದು, ನನ್ನ ಅಣ್ಣನ ಮೇಲೆ ಈ ಪ್ರಕರಣವನ್ನು ಕಟ್ಟಿ ನಾರಾಯಣ ರೈ ಅವರನ್ನು ಈ ಪ್ರಕರಣದಿಂದ ದೂರವಿಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

You may also like

Leave a Comment