Home » ಕಾರ್ಯಕರ್ತರಿಗೆ ಬಾಂಬ್,ಗ್ರಾನೈಡ್ ದೀಕ್ಷೆ ನೀಡಿಲ್ಲ,ತ್ರಿಶೂಲ ದೀಕ್ಷೆ ನೀಡಿದ್ದೇವೆ- ಶರಣ್ ಪಂಪ್‌ವೆಲ್

ಕಾರ್ಯಕರ್ತರಿಗೆ ಬಾಂಬ್,ಗ್ರಾನೈಡ್ ದೀಕ್ಷೆ ನೀಡಿಲ್ಲ,ತ್ರಿಶೂಲ ದೀಕ್ಷೆ ನೀಡಿದ್ದೇವೆ- ಶರಣ್ ಪಂಪ್‌ವೆಲ್

by Praveen Chennavara
0 comments

ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದಂತೆ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಕಾರ್ಯಕರ್ತರಿಗೆ ಬಾಂಬ್, ಗ್ರಾನೈಡ್ ದೀಕ್ಷೆ ಮಾಡಿಲ್ಲ. ಪ್ರತೀ ವರ್ಷವೂ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನಡೆಸುತ್ತೇವೆ. ಆಯುಧಪೂಜೆ ಸಂದರ್ಭ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಮಾಡಿದ್ದೇವೆ. ಇದು ಯಾರ ವಿರುದ್ಧವೂ ಅಲ್ಲ ಯಾರನ್ನು ಕೊಲ್ಲಬೇಕು ಎನ್ನುವ ದುರುದ್ದೇಶ ಇಲ್ಲ. ಕಾರ್ಯಕರ್ತರಿಗೆ ಆತ್ಮಸ್ಟೈರ್ಯ ತುಂಬಲು ತ್ರಿಶೂಲ ದೀಕ್ಷೆ ಮಾಡಿದ್ದೇವೆ. ಕಾನೂನು ಬದ್ಧವಾಗಿಯೇ ಇದನ್ನು ಮಾಡಿದ್ದೇವೆ. ಸಾರ್ವಜನಿಕವಾಗಿ ಮಾಡಿಲ್ಲ, ಕಾರ್ಯಾಲಯದ ಒಳಗಡೆ ನಡೆಸಿದ್ದೇವೆ ಎಂಬುವುದಾಗಿ ಮಾಧ್ಯಮಕ್ಕೆ ಶರಣ್ ಪಂಪ್‌ವೆಲ್ ಸ್ಪಷ್ಟಪಡಿಸಿದ್ದಾರೆ.

You may also like

Leave a Comment