Home » ಆರ್.ಎಸ್.ಎಸ್.ವಿಚಾರಗಳು ಸರಿ ಇರುತ್ತವೆ,ಅಂದಿನ ರಾಜಕಾರಣ ತತ್ವದ ಆಧಾರದಲ್ಲಿತ್ತು,ಇಂದಿನ ರಾಜಕಾರಣ ಬರೀ ಟೀಕೆ ಮಾಡುವುದೇ ಆಗಿದೆ- ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ

ಆರ್.ಎಸ್.ಎಸ್.ವಿಚಾರಗಳು ಸರಿ ಇರುತ್ತವೆ,ಅಂದಿನ ರಾಜಕಾರಣ ತತ್ವದ ಆಧಾರದಲ್ಲಿತ್ತು,ಇಂದಿನ ರಾಜಕಾರಣ ಬರೀ ಟೀಕೆ ಮಾಡುವುದೇ ಆಗಿದೆ- ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ

by Praveen Chennavara
0 comments

ಆರ್.ಎಸ್.ಎಸ್.ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರುತ್ತವೆ ಎಂದು ಆರ್‌ಎಸ್‍ಎಸ್‍ ಮೇಲೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೃದು ಧೋರಣೆ ತೋರಿ ಹೇಳಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಆರ್‌ಎಸ್‍ಎಸ್‍ ಕುರಿತು ಹೇಳಿಕೆ ವಿಚಾರವಾಗಿ ನಾನು ರಾಜಕಾರಣವನ್ನು ಮಾತಾನಾಡೋದಿಲ್ಲ. ಆರ್‌ಎಸ್‍ಎಸ್‍ ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರತ್ತವೆ. ಅವರ ಅವರ ವೈಯಕ್ತಿಕವಾಗಿದೆ, ನಾನು ಏನೂ ಮಾತನಾಡುವದಿಲ್ಲ ಎಂದು ಬಸವರಾಜ್ ಹೊರಟ್ಟಿ ಆರ್‌ಎಸ್‍ಎಸ್‍ ಮೇಲೆ ಮೃದು ಧೋರಣೆಯನ್ನು ತೋರಿದ್ದಾರೆ.

ಅಂದಿನ ರಾಜಕಾರಣ ತತ್ವದ ಆಧಾರದ ಮೇಲೆ ಇತ್ತು. ಇವತ್ತಿನ ರಾಜಕಾರಣ ಬರೀ ಟೀಕೆ ಮಾಡೋದಾಗಿದೆ. ಇದು ಜನರಿಗೆ ಬೇಜಾರಾಗಿದೆ. ಎಲ್ಲ ಪಕ್ಷದವರಿಗೂ ನಾನು ಹೇಳುತ್ತೆನೆ, ಬರೀ ಟೀಕೆ ಮಾಡಿ ಜನರ ಮೇಲೆ ಪರಿಣಾಮ ಬಿರೋದಿಲ್ಲ. ನಾವು ಏನ್ ಕೆಲಸ ಮಾಡುತ್ತೇವೆ ಅನ್ನೋದ ಜನರಿಗೆ ಗೊತ್ತಾಗಬೇಕು ಎಂದು ಹೊರಟ್ಟಿ ಇಂದಿನ ರಾಜಕೀಯ ಸ್ಥಿತಿ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

You may also like

Leave a Comment