Home » ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸನ್ನೇ ಎಗರಿಸಿದ ಕಳ್ಳರು | ಡಿಸೇಲ್ ಖಾಲಿಯಾಗುವವರೆಗೆ ಬಸ್ಸಿನಲ್ಲಿ ಕಳ್ಳರ ಜಾಲಿ ಡ್ರೈವ್ !!

ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸನ್ನೇ ಎಗರಿಸಿದ ಕಳ್ಳರು | ಡಿಸೇಲ್ ಖಾಲಿಯಾಗುವವರೆಗೆ ಬಸ್ಸಿನಲ್ಲಿ ಕಳ್ಳರ ಜಾಲಿ ಡ್ರೈವ್ !!

by ಹೊಸಕನ್ನಡ
0 comments

ಕಳ್ಳರು ಎಲ್ಲಿ ನಮಗೆ ಕದಿಯಲು ಅವಕಾಶ ಸಿಗುತ್ತದೆ ಎಂದು ಕಾದು ಕುಳಿತಿರುತ್ತಾರೆ. ಹಾಗೆಯೇ ಚಿತ್ರವಿಚಿತ್ರವಾದ ಕಳ್ಳರು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದಾರೆ.
ಚಿನ್ನ, ಬೆಳ್ಳಿ, ಹಣ, ದುಬಾರಿ ವಸ್ತುಗಳನ್ನು, ಸಾಕುಪ್ರಾಣಿಗಳನ್ನು ಕದಿಯುವುದನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲಿಯ ಕಳ್ಳರು ಏನು ಕದ್ದಿದ್ದಾರೆ ಎಂದು ತಿಳಿದರೆ ನೀವೇ ಆಶ್ಚರ್ಯಗೊಳಗಾಗುತ್ತೀರಿ.

ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅನ್ನು ಕದ್ದೊಯ್ದ ಕಳ್ಳರು, ಹಲವೆಡೆ ಜಾಲಿ ಡ್ರೈವ್ ಹೋಗಿ ಮತ್ತೆ ಪಕ್ಕದ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ.

ಇಂತಹ ವಿಚಿತ್ರ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ಅನ್ನು ಸೋಮವಾರ ಕಳ್ಳರು ಕದ್ದೊಯ್ದಿದ್ದರು. ಕುಣಿಗಲ್ ತಾಲೂಕಿನ ಅಮೃತೂರು, ಯಡಿಯೂರು ಸುತ್ತಮುತ್ತಲ ಗ್ರಾಮಗಳ ಸಮೀಪ ಈ ಬಸ್ ಅನ್ನು ಓಡಾಡಿಸಿದ ಕಳ್ಳರು ಮತ್ತೆ ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಗ್ರಾಮದತ್ತ ಬಂದಿದ್ದಾರೆ.

ಡೀಸೆಲ್ ಖಾಲಿಯಾದ ಕಾರಣ ಆ ಬಸ್ ಅನ್ನು ಜನ್ನೇನಹಳ್ಳಿ ಗ್ರಾಮದ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದಿರುವುದೇ ಕಳ್ಳರಿಗೆ ಪ್ಲಸ್ ಪಾಯಿಂಟ್ ಆಗಿದೆ ಎನ್ನಲಾಗಿದೆ.

You may also like

Leave a Comment