Home » ಉಡುಪಿ,ದ.ಕ : ಕಂಬಳಗಳ ಸಂಭಾವ್ಯ ಪಟ್ಟಿ ಬಿಡುಗಡೆ

ಉಡುಪಿ,ದ.ಕ : ಕಂಬಳಗಳ ಸಂಭಾವ್ಯ ಪಟ್ಟಿ ಬಿಡುಗಡೆ

by Praveen Chennavara
0 comments

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು ಈ ಋತುವಿನ ಕಂಬಳಗಳ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ಮಹಾಸಭೆಯಲ್ಲಿ ಅಂತಿಮಗೊಳಿಸಿ ಅಂತಿಮಪಟ್ಟಿಯನ್ನು ಬಿಡುಗಡೆಗೊಳಿಸಲಿದೆ.

ಸಂಭಾವ್ಯ ಪಟ್ಟಿ ಪ್ರಕಾರ ಈ ಋತುವಿನ ಮೊದಲ ಕಂಬಳ ನ. 27ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ. ಡಿ. 11ರಂದು ಹೊಕ್ಕಾಡಿ, ಡಿ. 18 ಮಂಗಳೂರು, ಡಿ. 26ರಂದು ಮುಲ್ಕಿ, 2022ರ ಜ. 1ರಂದು ಕಕ್ಕೆಪದವು, ಜ. 8ರಂದು ಅಡ್ವೆ ನಂದಿಕೂರು, ಜ. 16ರಂದು ಮಿಯಾರು, ಜ.22ರಂದು ಪುತ್ತೂರು, ಜ. 29ರಂದು ಐಕಳ, ಫೆ. 5ರಂದು ಬಾರಾಡಿ, ಫೆ. 12ರಂದು ಜಪ್ಪು, ಫೆ. 19ರಂದು ವಾಮಂಜೂರು, ಫೆ. 26ರಂದು ಪೈವಳಿಕೆ, ಮಾ. 5ರಂದು ಕಟಪಾಡಿ, ಮಾ. 12ರಂದು ಉಪ್ಪಿನಂಗಡಿ, ಮಾ. 19ರಂದು ಬಂಗಾಡಿ, ಮಾ. 26ರಂದು ವೇಣೂರು ಕಂಬಳ ನಡೆಸುವ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಅಕ್ಟೋಬರ್‌ 30ರಂದು ಮೂಡುಬಿದಿರೆಯಲ್ಲಿ ನಡೆಯುವ ಕಂಬಳ ಸಮಿತಿಯ ಮಹಾಸಭೆಯಲ್ಲಿ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಕಂಬಳ ಸಮಿತಿ ತಿಳಿಸಿದೆ

You may also like

Leave a Comment