Home » ಉಳ್ಳಾಲ:ಪೊಲೀಸರ ಮೇಲೆಯೇ ತಲವಾರು ಬೀಸಿ ಕೊಲೆಗೆ ಯತ್ನಿಸಿದ ಆರೋಪಿ!!ವಾರಂಟ್ ಹಿಡಿದು ಬಂಧಿಸಲು ತೆರಳಿದ್ದ ವೇಳೆ ನಡೆದ ಘಟನೆ

ಉಳ್ಳಾಲ:ಪೊಲೀಸರ ಮೇಲೆಯೇ ತಲವಾರು ಬೀಸಿ ಕೊಲೆಗೆ ಯತ್ನಿಸಿದ ಆರೋಪಿ!!ವಾರಂಟ್ ಹಿಡಿದು ಬಂಧಿಸಲು ತೆರಳಿದ್ದ ವೇಳೆ ನಡೆದ ಘಟನೆ

0 comments

ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಪೊಲೀಸರ ಬಲೆಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ವಾರಂಟ್ ಮೇಲೆ ಬಂಧಿಸಲು ತೆರಳಿದ್ದಾಗ ಪೊಲೀಸರಾ ಮೇಲೆಯೇ ತಲವಾರು ಬೀಸಿ ಕೊಲೆಗೆ ಯತ್ನಿಸಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಮೇಲೆಯ ಧರ್ಮ ನಗರ ನಿವಾಸಿ ಮುಕ್ತಾರ್ ಅಹ್ಮದ್ ಎಂಬಾತನನ್ನು ವಶಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.

ಆರೋಪಿ ಮುಕ್ತಾರ್ ತಲವಾರು ಬೀಸಿ ಕೊಲೆಗೆ ಯತ್ನಿಸಿ ಪರಾರಿಯಾದರೆ, ಆತ ಪರಾರಿಯಾಗಲು ಸಹಕರಿಸಿದ ಇನ್ನೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮನಗರ ನಿವಾಸಿ ಕ್ರಿಮಿನಲ್ ಆರೋಪಿಯಾಗಿದ್ದ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಕೆಲ ಸಮಯದಿಂದ ಬಲೆ ಬೀಸಿದ್ದು, ವಿವಿಧ ಪ್ರಕರಣಗಳ ಆರೋಪಿ ಆಗಿದ್ದ ಈತ ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಕಾರಣದಿಂದ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಗುರುವಾರ ಬೆಳಗ್ಗೆ ಆತನನ್ನು ಬಂಧಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ತಲವಾರು ಹಿಡಿದುಕೊಂಡು ಹೊರಬಂದ ಮುಕ್ತಾರ್, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಎನ್ನಲಾಗಿದೆ. ಬಳಿಕ ನವಾಝ್ ಎಂಬಾತನ ಬೈಕಿನಲ್ಲಿ ಆತ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಬೈಕನ್ನು ಹಿಡಿದಿದ್ದಾರೆ. ಆದರೆ, ಇದರ ನಡುವಲ್ಲೇ ಮುಕ್ತಾರ್ ಅಹ್ಮದ್ ಬೈಕಿನಿಂದ ಇಳಿದು ಎಪ್ ಆಗಿದ್ದು, ಬೈಕ್ ಸವಾರ ನವಾಝ್ ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಬೈಕ್ ಕಾರ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಆತನನ್ನು ಪೋಲಿಸರು ಬಂಧಿಸಿದ್ದು, ಆರೋಪಿ ಮುಕ್ತಾರ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

You may also like

Leave a Comment