ಹೃದಯ ಶಸ್ತ್ರಚಿಕಿತ್ಸೆ ` ನಂತರ ನಾಲ್ಕು ರೋಗಿಗಳಿಗೆ ಗಾಳಿಯನ್ನು ಚುಚ್ಚುವ ಮೂಲಕ ಹತ್ಯೆ ಮಾಡಿದ ಟೆಕ್ಸಾಸ್‌ನ ಸೀರಿಯಲ್ ಕಿಲ್ಲರ್ ನರ್ಸ್ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹಾಲ್ಸ್‌ವಿಲ್ಲೆಯ 37 ವರ್ಷದ ಎಲಿಯಂ ಡೇವಿಸ್ (William Davis) ಮಂಗಳವಾರ ಅಕ್ಟೋಬರ್ 19ರಂದು ನಡೆದ ಕೊಲೆಗಳಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿತ್ತು. ಪ್ರಸ್ತುತ ಕಠಿಣ ಶಿಕ್ಷೆ ಎದುರಿಸುತ್ತಿದ್ದಾರೆ. 2017 ಮತ್ತು 2018ರಲ್ಲಿ , ಡೇವಿಸ್ ಎಂಬ ನರ್ಸ್ ಕಿಸಸ್ ಟ್ರಿನಿಟಿ ಮದರ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಜಾನ್ ಲಾಫರ್ಟಿ, ರೊನಾಲ್ಡ್ ಕ್ಲಾರ್ಕ್, ಕ್ರಿಸ್ಟೋಫರ್ ಗ್ರೀನ್ ವೇ ಮತ್ತು ಜೋಸೆಫ್ ಕಲಿನಾ ಅವರ ಅಪಧಮನಿಗಳಿಗೆ (arteries) ಗಾಳಿಯನ್ನು ಚುಚ್ಚಿದ್ದಾರೆ.
ಪಾಸಿಕ್ಯೂಟರ್‌ಗಳು ಡೇವಿಸ್‌ನನ್ನು ಸರಣಿ ಕೊಲೆಗಾರ ಎಂದು ಹೇಳಿದ್ದು ಆತ ಹತ್ಯೆಯನ್ನು ಆನಂದಿಸಿದ್ದರಿಂದಲೇ ಈ ರೀತಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ ಡಲ್ಲಾಸ್ ಪ್ರದೇಶದ ಶ್ವಾಸಕೋಶಶಾಸ್ತ್ರಜ್ಞ ಮತ್ತು ಆಂತರಿಕ ಔಷಧದ ಪಾಧ್ಯಾಪಕ ಡಾ ವಿಲಿಯಂ ಯಾರ್‌ಬೊ ಮೆದುಳಿನ ಅಪಧಮನಿಯ ವ್ಯವಸ್ಥೆಗೆ ಗಾಳಿಯನ್ನು ಚುಚ್ಚುವುದು ಹೇಗೆ ಮಿದುಳಿನ ಗಾಯ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ತೀರ್ಪುಗಾರರಿಗೆ ತಿಳಿಸಿದರು.
ಫೆಬ್ರವರಿ 2018ರಲ್ಲಿ ಡೇವಿಸ್‌ನನ್ನು ಕ್ರಿಸ್ಟಸ್ ಮದರ್ ಫ್ರಾನ್ಸಿಸ್ ಆಸತ್ರೆಯಿಂದ ವಜಾ ಮಾಡಲಾಯಿತು ಒಂದೆರಡು ತಿಂಗಳ ನಂತರ, ಸ್ಟೋಕ್ ತರಹದ ರೋಗಲಕ್ಷಣಗಳನ್ನು ಅನುಭವಿಸಿದ ನಾಲ್ಕು ರೋಗಿಗಳು ಸಾವಿಗೀಡಾದಾಗ ಅಲ್ಲಿದ್ದದ್ದು ಡೇವಿಸ್ ಮಾತ್ರ ಎಂದು ಗೊತ್ತಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
