Home » ಹುಟ್ಟುಹಬ್ಬದಂದು ನೇತ್ರದಾನಕ್ಕೆ ಸಹಿ ಹಾಕಿದ ಬೆಳ್ತಂಗಡಿಯ ಯುವ ಮುಖಂಡ ಅಭಿನಂದನ್ ಹರೀಶ್ ಕುಮಾರ್

ಹುಟ್ಟುಹಬ್ಬದಂದು ನೇತ್ರದಾನಕ್ಕೆ ಸಹಿ ಹಾಕಿದ ಬೆಳ್ತಂಗಡಿಯ ಯುವ ಮುಖಂಡ ಅಭಿನಂದನ್ ಹರೀಶ್ ಕುಮಾರ್

by Praveen Chennavara
0 comments

ಬೆಳ್ತಂಗಡಿ: ವಿಶೇಷ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ರವರ ಪುತ್ರ ಯುವ ನಾಯಕ ಹಾಗೂ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ರವರು ತಮ್ಮ ಜನ್ಮದಿನವಾದ ಅ.21 ರಂದು ನೇತ್ರದಾನದ ಪ್ರತಿಜ್ಞೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಬಡವರ ಮತ್ತು ನೊಂದವರ ಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಗುಣಗಳುಳ್ಳ, ಸರಳ ವ್ಯಕ್ತಿತ್ವದ ಅಭಿನಂದನ್ ಹರೀಶ್ ಕುಮಾರ್ ರವರು ಬೆಳ್ತಂಗಡಿ ಯುವ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾಗಿ ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನಿಕಟಪೂರ್ವ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಇವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸರ್ವರೂ ಸದಾ ನೆನಪಿಡುವಂತೆ ತಮ್ಮ ಅಮೂಲ್ಯವಾದ ನೇತ್ರಗಳನ್ನು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾನ ಮಾಡುವ ಪ್ರತಿಜ್ಞಾ ವಿಧಿಗೆ ಸಹಿ ಹಾಕಿದ್ದು, ಯುವಕರಿಗೆ, ಸಮಾಜಕ್ಕೆ ಮಾದರಿಯಾಗಿದ್ದಾರೆ.

You may also like

Leave a Comment