Home » ಮಂಗಳೂರು : ನಾಪತ್ತೆಯಾದ ಬಾಲಕಿ ಶವವಾಗಿ ನದಿಯಲ್ಲಿ ಪತ್ತೆ

ಮಂಗಳೂರು : ನಾಪತ್ತೆಯಾದ ಬಾಲಕಿ ಶವವಾಗಿ ನದಿಯಲ್ಲಿ ಪತ್ತೆ

by Praveen Chennavara
0 comments

ಮಂಗಳೂರು: ಆದಿತ್ಯವಾರ ಮನೆಯಿಂದ ದ ನಾಪತ್ತೆಯಾಗಿದ್ದ 11 ವರ್ಷ ಪ್ರಾಯದ ಬಾಲಕಿಯ ಮೃತದೇಹವು ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ.

ಕುದ್ರೋಳಿಯ ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಮೃತಪಟ್ಟ ಬಾಲಕಿ, ಈಕೆ ರವಿವಾರ ಬೆಳಗ್ಗೆ ಸುಮಾರು ಗಂಟೆ ಮನೆಯಿಂದ ದಿಢೀರ್ ಕಾಣೆಯಾಗಿದ್ದಳು. ಎಲ್ಲಾ ಕಡೆ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.

ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200 ಮೀ. ದೂರದಲ್ಲಿರುವ ನದಿ ಕಡೆಗೆ ಬಾಲಕಿ ಮುಫೀದಾ ತೆರಳುತ್ತಿರುವುದು ಕಂಡುಬಂತು. ಸ್ಥಳೀಯರು ಕುದ್ರೋಳಿಯ ಕಾರ್ಖಾನೆ ಬಳಿಯ ನದಿಯಲ್ಲಿ ಶೋಧ ನಡೆಸಿದಾಗ ಮುಫೀದಾಳ ಮೃತದೇಹ ಪತ್ತೆಯಾಗಿದೆ.

ಈಕೆ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿದ್ದಾಳೆ ಎನ್ನಲಾಗಿದೆ. ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment