Home » ಎಡಮಂಗಲದಲ್ಲಿ ಬಿರುಕು ಬಿಟ್ಟ ರೈಲ್ವೆ ಹಳಿ | ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!

ಎಡಮಂಗಲದಲ್ಲಿ ಬಿರುಕು ಬಿಟ್ಟ ರೈಲ್ವೆ ಹಳಿ | ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!

by Praveen Chennavara
0 comments

ಕಡಬ: ಸುಬ್ರಹ್ಮಣ್ಯ ಮಂಗಳೂರು ರೈಲ್ವೇಯ ಸುಬ್ರಹ್ಮಣ್ಯ ಸಮೀಪ ಸೋಮವಾರ ಹಳಿ ಬಿರುಕು ಬಿಟ್ಟರೂ ರೈಲು ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ.

ಮುಂಜಾನೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ನೆಟ್ಟಣದಿಂದ( ಸುಬ್ರಹ್ಮಣ್ಯ ರೋಡ್) ಮುಂದಕ್ಕೆ ಎಡಮಂಗಲ ಸಮೀಪ ತಲುಪಿದಾಗ ಹಳಿ ಬಿರುಕು ಬಿಟ್ಟಿರುವುದು ರೈಲಿನ ಒಂದು ಬೋಗಿ ಚಲಿಸಿದ ಬಳಿಕ ಚಾಲಕನ ಗಮನಕ್ಕೆ ಬಂದಿದೆ.ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ, ನಿಲುಗಡೆ ಮಾಡಿ ಘಟನೆಯನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಬಳಿಕ ಕಾರ್ಯಾಚರಣೆ ನಡೆಸಿ ಹಳಿ ದುರಸ್ತಿ ನಡೆಸಲಾಯಿತು.ನಂತರ ರೈಲು ಸಂಚರಿಸಲು ಅವಕಾಶ ನೀಡಲಾಯಿತು.ಚಾಲಕನ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

You may also like

Leave a Comment