Home » ರಸ್ತೆ ದಾಟುತ್ತಿದ್ದ ಬಾಲಕನಿಗೆ ಬೈಕ್ ಡಿಕ್ಕಿ | ನೆಲಕ್ಕೆ ಬಿದ್ದಾತನ ಮೇಲೆ ಆಟೋ ಗೂಡ್ಸ್ ಚಲಿಸಿ ಬಾಲಕ ಸಾವು

ರಸ್ತೆ ದಾಟುತ್ತಿದ್ದ ಬಾಲಕನಿಗೆ ಬೈಕ್ ಡಿಕ್ಕಿ | ನೆಲಕ್ಕೆ ಬಿದ್ದಾತನ ಮೇಲೆ ಆಟೋ ಗೂಡ್ಸ್ ಚಲಿಸಿ ಬಾಲಕ ಸಾವು

by Praveen Chennavara
0 comments

ರಸ್ತೆ ದಾಟುತ್ತಿದ್ದ ಬಾಲಕನಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಬಳಿಕ ಗೂಡ್ಸ್ ಆಟೊದಡಿಗೆ ಬಿದ್ದು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ನ ಅತಿಂಞಾಲ್ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಚುಳ್ಳಿಕೆರೆಯ ಬಿಜು ಎಂಬವರ ಪುತ್ರ ಆಶಿಲ್(15) ಮೃತ ಪಟ್ಟ ಬಾಲಕ.

ಕಳೆದ ರಾತ್ರಿ ಮನೆ ಸಮೀಪದ ಅಂಗಡಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ಅತೀ ವೇಗದಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ಆಶಿಲ್ ದೇಹದ ಮೇಲೆ ಗೂಡ್ಸ್ ಆಟೋ ಹರಿದು,ಆತ ಗಂಭೀರವಾಗಿ ಗಾಯಗೊಂಡನು.

ಕೂಡಲೇ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಆಶಿಲ್ ರಾಜಾಪುರದ ಹೋಲಿ ಫ್ಯಾಮಿಲಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದನು.

ಘಟನೆಯ ಬಗ್ಗೆ ರಾಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment