Home » ಬೆಳ್ತಂಗಡಿ | ವೇಣೂರಿನಲ್ಲಿ ಯುವಕನೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವು

ಬೆಳ್ತಂಗಡಿ | ವೇಣೂರಿನಲ್ಲಿ ಯುವಕನೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವು

0 comments

ಯುವಕನೋರ್ವ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ವೇಣೂರಿನ ಸರೋಜಾ ಎಂಬವರ ಪುತ್ರ ಚಂದ್ರಶೇಖರ್ (22) ಎಂದು ಗುರುತಿಸಲಾಗಿದೆ. ಈತ ಶ್ರೀನಿಧಿ ಎಂಟರ್ಪ್ರೈಸಸ್ ಅಲ್ಲಿ ಕೆಲಸ ಮಾಡುತ್ತಿದ್ದು, ಶಾಮಿಯಾನದ ಪೆಂಡಲ್ ಗಳನ್ನು ತೊಳೆಯಲು ನದಿಗೆ ಇತರರೊಂದಿಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮುಳುಗು ತಜ್ಞರು ಹಾಗೂ ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.

ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಕೂಡ ಆಗಮಿಸಿ ಮೃತದೇಹ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.

You may also like

Leave a Comment