Home » ನಿವೃತ ಅಂಚೆ ಇಲಾಖೆ ಉದ್ಯೋಗಿ ಪೂವಪ್ಪ ಪೂಜಾರಿ ಮುಕ್ಕೂರು ನಿಧನ

ನಿವೃತ ಅಂಚೆ ಇಲಾಖೆ ಉದ್ಯೋಗಿ ಪೂವಪ್ಪ ಪೂಜಾರಿ ಮುಕ್ಕೂರು ನಿಧನ

by Praveen Chennavara
100 comments

ಸುಳ್ಯ : ಪೆರುವಾಜೆ ಗ್ರಾಮದ ಮುಕ್ಕೂರು ನಿವಾಸಿ ನಿವೃತ್ತ ಅಂಚೆ ಉದ್ಯೋಗಿ ಪೂವಪ್ಪ ಪೂಜಾರಿ ಮುಕ್ಕೂರು (72) ಅ.29 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮುಕ್ಕೂರು ಶಾಖಾ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.
ಮೃತರು ಪತ್ನಿ ದೇವಕಿ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

You may also like

Leave a Comment