Home » ಪುನೀತ್ ರಾಜಕುಮಾರ್ ಅವರ ನಿಧನದಿಂದ ಮನನೊಂದು ಅಭಿಮಾನಿ ಆತ್ಮಹತ್ಯೆ

ಪುನೀತ್ ರಾಜಕುಮಾರ್ ಅವರ ನಿಧನದಿಂದ ಮನನೊಂದು ಅಭಿಮಾನಿ ಆತ್ಮಹತ್ಯೆ

0 comments

ನಟ ಪುನೀತ್ ರಾಜಕುಮಾರ್ ರವರ ನಿಧನದ ಸುದ್ದಿ ಕೇಳಿ ಅವರ ಅಪ್ಪಟ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಪೇಟೆ ತಾಲೂಕು ಬಂಡಿಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಬಂಡಿಗೇರಿ ಗ್ರಾಮದ ಸಾದ್ದಪ್ಪ(40) ಎಂಬವನೇ ಪುನೀತ್ ರಾಜಕುಮಾರ್ ನಿಧನದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಸಾದ್ದಪ್ಪ ಪುನೀತ್ ರವರ ನಿಧನದಿಂದ ಮನನೊಂದು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಲಿಸ್ ವಸತಿಗೃಹದ ಸಮೀಪದ ಕಾಲುವೆಗೆ ಹಾರಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ನಿಧನದ ನಂತರ ಅವರ ಸಹೋದರ ರಾಘವೇಂದ್ರ ರಾಜಕುಮಾರ್ ಜನರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದರು. ಆದರೂ ಹುಚ್ಚು ಅಭಿಮಾನದಿಂದ ತಮ್ಮ ಜೀವವನ್ನು ಕಳೆದುಕೊಳ್ಳುವುದು ಯಾವ ನ್ಯಾಯ. ಅಭಿಮಾನ ಇರಲಿ ಆದರೆ ಹುಚ್ಚು ಅಭಿಮಾನ ಇರಬಾರದು.

You may also like

Leave a Comment