Home » ಪುತ್ತೂರು : ಬಾರ್‌ನ ಗಾಜು ಒಡೆದು ಮಂಗಳಮುಖಿಯರ ದಾಂಧಲೆ

ಪುತ್ತೂರು : ಬಾರ್‌ನ ಗಾಜು ಒಡೆದು ಮಂಗಳಮುಖಿಯರ ದಾಂಧಲೆ

by Praveen Chennavara
0 comments

ಪುತ್ತೂರು: ಸುಮಾರು 10ರಿಂದ 15 ಮಂದಿಯ ಮಂಗಳಮುಖಿಯರು ಪುತ್ತೂರಿನ ಬಾರ್ ವೊಂದರಲ್ಲಿ ಬಾಗಿಲ ಗಾಜು ಒಡೆದ ದಾಂದಲೆ ನಡೆಸಿದ ಘಟನೆ ಅ.30 ರಂದು ಮಧ್ಯಾಹ್ನ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಬಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ.

ಮಂಗಳ ಮುಖಿಯರು ಬಾರ್ ನಲ್ಲಿ ತಮಗೆ ನೀಡಿದ ದಾನಕ್ಕಿಂತ ಹೆಚ್ಚಿನ ದಾನ ಬೇಡಿಕೆ ನೀಡಿದ್ದಲ್ಲದೆ ನಮಗೆ ಕೊಟ್ಟ ದಾನ ರೂಪದ ಹಣ ಕಡಿಮೆ ಆಗಿದೆ ಎಂದು ಸಂಸ್ಥೆಯ ಕ್ಯಾಶರ್ ಅವರನ್ನು ನಿಂಧಿಸಿದಲ್ಲದೆ ಬಾರ್ ನ ಬಾಗಿಲ ಗಾಜನ್ನು ಹುಡಿ ಮಾಡಿದ್ದಾರೆ. ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿದಾಗ ಮಂಗಳಮುಖಿಯರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ ಪುತ್ತೂರಿನ ಪ್ರಸಿದ್ಧ ಜವುಳಿ ಮಳಿಗೆಯಲ್ಲೂ ದಾಂಧಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಈ ಕುರಿತು ಪುತ್ತೂರು‌ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

You may also like

Leave a Comment