9
ಮಣಿಪಾಲದ ಪಬ್ ಒಂದರಲ್ಲಿ ಯಕ್ಷಗಾನದ ಮಹಿಷಾಸುರನ ವೇಷ ಧರಿಸಿದ ಯುವಕನೊಬ್ಬ ಡಿಜೆ ಓಪರೇಟ್ ಮಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕರಾವಳಿಯ ಯಕ್ಷ ಕಲಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದೇವಿ ಮಹಾತ್ಮೆ ಪ್ರಸಂಗದಲ್ಲಿ ಬರುವ ಮಹಿಷಾಸುರನ ವೇಷ ಧರಿಸಿ ಡಿಜೆ ಆಪರೇಟ್ ಸಹಿತ ಪಬ್ ನಲ್ಲಿ ಯಕ್ಷಗಾನ ವೇಷ ಹಾಕಿದ ವಿಚಾರ ಸದ್ಯ ಉಡುಪಿ-ಮಂಗಳೂರು ಭಾಗದಲ್ಲಿ ಚರ್ಚೆಗೆ ಕಾರಣವಾಗಿದ್ದು ಘಟನೆಗೆ ಕಾರಣಕರ್ತನಾದ ಯುವಕ ಕ್ಷಮೆ ಕೇಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಆಗ್ರಹ ವ್ಯಕ್ತವಾಗಿದೆ.
