Home » ಬೆಂಗಳೂರಿನಿಂದ ನಾಪತ್ತೆಯಾದ ಹಿಂದೂ ಯುವತಿ ಅನ್ಯಮತೀಯ ವಿವಾಹಿತನ ಜತೆ ಪುತ್ತೂರಿನಲ್ಲಿ ಪತ್ತೆ | ಹಿಂ.ಜಾ.ವೇ.ಯಿಂದ ಠಾಣೆಗೆ ಮಾಹಿತಿ

ಬೆಂಗಳೂರಿನಿಂದ ನಾಪತ್ತೆಯಾದ ಹಿಂದೂ ಯುವತಿ ಅನ್ಯಮತೀಯ ವಿವಾಹಿತನ ಜತೆ ಪುತ್ತೂರಿನಲ್ಲಿ ಪತ್ತೆ | ಹಿಂ.ಜಾ.ವೇ.ಯಿಂದ ಠಾಣೆಗೆ ಮಾಹಿತಿ

by Praveen Chennavara
0 comments

ಪುತ್ತೂರು: ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಂದಿಗೆ ಬೆಂಗಳೂರು ಮೂಲದ ಹಿಂದೂ ಯುವತಿಯೋರ್ವಳು ಬಂದು ಪುತ್ತೂರಿನಲ್ಲಿ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ನ.2 ರಂದು ತಡರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ವಾಸಿಂ(36) ಎಂಬ ಅನ್ಯಕೋಮಿನ ವ್ಯಕ್ತಿಯೊಂದಿಗೆ ಕುಂದಾಪುರ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಯುವತಿ ಪ್ರೀತಿಸಿ ಆತನೊಂಗಿದೆ ಮನೆ ಬಿಟ್ಟು ಬಂದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಆಗಮಿಸಿ ವಾಸಿಂ ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಯುವತಿಯ ಮನೆಯವರ ಬಂದ ಬಳಿಕ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

You may also like

Leave a Comment