Home » ಬಣ್ಣ ಬಣ್ಣದ ಉಡುಗೆ ತೊಟ್ಟು ಬೆಟ್ಟದ ತುತ್ತ ತುದಿಯಲ್ಲಿ ಫೋಟೋ ಗೆ ಪೋಸ್ ಕೊಟ್ಟಾಕೆ 05 ಸೆಕುಂಡುಗಳಲ್ಲಿ ಮಾಯ!! ಪ್ರವಾಸಿ ದಂಪತಿಗಳ ಬಾಳಿನಲ್ಲಿ ಬಡಿದೇ ಬಿಟ್ಟಿತು ಬರಸಿಡಿಲು

ಬಣ್ಣ ಬಣ್ಣದ ಉಡುಗೆ ತೊಟ್ಟು ಬೆಟ್ಟದ ತುತ್ತ ತುದಿಯಲ್ಲಿ ಫೋಟೋ ಗೆ ಪೋಸ್ ಕೊಟ್ಟಾಕೆ 05 ಸೆಕುಂಡುಗಳಲ್ಲಿ ಮಾಯ!! ಪ್ರವಾಸಿ ದಂಪತಿಗಳ ಬಾಳಿನಲ್ಲಿ ಬಡಿದೇ ಬಿಟ್ಟಿತು ಬರಸಿಡಿಲು

0 comments

ಅವರಿಬ್ಬರೂ ಪ್ರವಾಸಿ ದಂಪತಿ, ತಮ್ಮ ಬಿಡುವಿನ ವೇಳೆಯನ್ನು ಊರು ಸುತ್ತಲು , ಪ್ರೇಕ್ಷಣಿಯ ಸ್ಥಳಗಳ ಭೇಟಿಗೆ ಮೀಸಲಿಡುತ್ತ, ಅಲ್ಲಿಗೆ ತೆರಳಿ ಅಂದಚಂದದ ಫೋಟೋ ಕ್ಲಿಕ್ಕಿಸಿಕೊಂಡು, ಅದನ್ನು ತಮ್ಮ ಫೇಸ್ಬುಕ್,ಇನ್ಸ್ಟಾಗ್ರಾಮ್ ಗಳಲ್ಲಿ ಹಂಚಿಕೊಳ್ಳುವುದರಲ್ಲಿ ಅವರಿಗಿದ್ದ ಖುಷಿಗೆ ಪಾರವೇ ಇರಲಿಲ್ಲ. ಆದರೆ ಆ ದಂಪತಿಯ ಬಾಳಿನಲ್ಲೀಗ ಬರಸಿಡಿಲು ಬಡಿದಿದೆ, ಬೆಳಕು ಮಾಯವಾಗಿ ಕತ್ತಲು ಆವರಿಸಿದೆ, ಕೇವಲ 05 ಸೆಕುಂಡುಗಳ ಅಂತರದಲ್ಲಿ ತನ್ನವಳೇ ಮಾಯವಾಗಿ ಹೋಗಿದ್ದಾಳೆ.

ಝೋ ಸ್ನೊಕ್ಸೆ ಮತ್ತು ಜಾನ್ಸೆನ್ ದಂಪತಿಗಳು ಲಕ್ಷಂಬರ್ಗ್ (Luxembourg) ಪ್ರಾಂತ್ಯದ ನದ್ರಿನ್ (Nadrin) ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಬೆಟ್ಟದ ತುದಿಯಲ್ಲಿ ಸ್ನೊಕ್ಸೆ ಬಣ್ಣ ಬಣ್ಣದ ಉಡುಗೆ ತೊಟ್ಟು ಗಂಡನಿಂದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಳು.ಇತ್ತ ಫೋಟೋ ಕ್ಲಿಕ್ಕಿಸುತ್ತ ನಾಯಿಯನ್ನು ಓಡಿಸಲೆಂದು ಹಿಂದೆ ತಿರುಗಿದ ಜಾನ್ಸೆನ್, ಪುನಃ ಆಕೆಯತ್ತ ತಿರುಗಿದಾಗ ಆಕೆ ಮಾಯವಾಗಿದ್ದಳು. ಕೆಲ ಸೆಕುಂಡುಗಳ ಅಂತರದಲ್ಲಿ ಆಕೆ ಬೆಟ್ಟದ ತುದಿಯಿಂದ ಆಯತಪ್ಪಿ ನೂರು ಅಡಿ ಆಲದ ಪ್ರಪಾತಕ್ಕೆ ಬಿದ್ದು ತನ್ನ ಇಹಲೋಕವನ್ನೇ ತ್ಯಜಿಸಿದ್ದಳು.

ಆಕೆಯ ಆಸೆಯಂತೆ ಬೆಟ್ಟದ ತುದಿಯಲ್ಲಿನ ಫೋಟೋ ಶೂಟ್ ಆಕೆಯ ಪ್ರಾಣವನ್ನೇ ತೆಗೆಯುತ್ತದೆ ಎಂದುಕೊಂಡಿರಲಿಲ್ಲ,ಕೇವಲ ಐದು ಸೆಕುಂಡುಗಳಲ್ಲಿ ನಡೆದ ಅವಘಡದಿಂದಾಗಿ ಆಕೆಯ ನೆನಪು ಸದಾ ಕಾಡುತ್ತಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ ಜಾನ್ಸನ್.

You may also like

Leave a Comment