Home » ಮಂಗಳೂರು:ಬುರ್ಖಾ ಧರಿಸಿದ ಯುವತಿ, ಮತ್ತೊರ್ವ ಯುವಕನ ನಡುವೆ ನಡೆಯಿತು ಲವ್ವಿ ಡವ್ವಿಮಂಗಳೂರಿನ ಶಾಪಿಂಗ್ ಮಾಲೊಂದರ ಬಾಲ್ಕನಿಯಲ್ಲಿ ನಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

ಮಂಗಳೂರು:ಬುರ್ಖಾ ಧರಿಸಿದ ಯುವತಿ, ಮತ್ತೊರ್ವ ಯುವಕನ ನಡುವೆ ನಡೆಯಿತು ಲವ್ವಿ ಡವ್ವಿ
ಮಂಗಳೂರಿನ ಶಾಪಿಂಗ್ ಮಾಲೊಂದರ ಬಾಲ್ಕನಿಯಲ್ಲಿ ನಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

0 comments

ಮಂಗಳೂರಿನ ಹೆಸರಾಂತ ಶಾಪಿಂಗ್ ಮಾಲ್ ಒಂದರ ಮಹಡಿಯ ಬಾಲ್ಕನಿಯಲ್ಲಿ ಹಾಡಹಗಲೇ ಯುವಕ ಮತ್ತು ಯುವತಿ ತಮ್ಮ ಪ್ರೇಮದ ಕಡಲಲ್ಲಿ ಮುಳುಗೇಳುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಯುವತಿಯು ಬುರ್ಖ ಧರಿಸಿದ್ದು ಯುವಕ ಆಕೆಯ ದೇಹಗಳನ್ನು ಸ್ಪರ್ಶಿಸಿ ಮುತ್ತಿಕ್ಕಲು ಪ್ರಯತ್ನಸುವ ದೃಶ್ಯ ಇದಾಗಿದ್ದು, ನೆಟ್ಟಿಗರು ಇವರಿಬ್ಬರ ಪ್ರೇಮ ಸಲ್ಲಾಪವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅನುಚಿತ ವರ್ತನೆ ಸರಿಯಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಸದ್ಯ ಇವರಿಬ್ಬರ ರಸಗಳಿಗೆಯ ಚಿತ್ರಗಳು, ಪರಸ್ಪರ ಚುಂಬಿಸಲು ಪರದಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳು ಕುತೂಹಲದಿಂದ ಶೇರ್ ಮಾಡುತ್ತಿವೆ. ಯುವಕ-ಯುವತಿ ಎಲ್ಲಿಯವರು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

You may also like

Leave a Comment