Home » ಬಾಲಕಿಗೆ ಲೈಂಗಿಕ ದೌರ್ಜನ್ಯದ ಆರೋಪಿ ದಲಿತ ಮುಖಂಡ ರಾಜು ಹೊಸ್ಮಠ ಪರಾರಿಯಾಗಲು ಸಹಕಾರ | ಇಬ್ಬರ ಬಂಧನ

ಬಾಲಕಿಗೆ ಲೈಂಗಿಕ ದೌರ್ಜನ್ಯದ ಆರೋಪಿ ದಲಿತ ಮುಖಂಡ ರಾಜು ಹೊಸ್ಮಠ ಪರಾರಿಯಾಗಲು ಸಹಕಾರ | ಇಬ್ಬರ ಬಂಧನ

by Praveen Chennavara
0 comments

ಪುತ್ತೂರು: ಪೋಕ್ಸೋ ಕಾಯಿದೆಯಡಿ ಕೇಸು ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ದಲಿತ ಸಂಘಟಣೆಯ ಮುಖಂಡ ರಾಜು ಹೊಸ್ಮಠರವರು ಪರಾರಿಯಾಗಲು ಸಹಕಾರ ನೀಡಿರುವ ಆರೋಪದಡಿ ಉಜಿರೆಯ ಗಣೇಶ್ ಮತ್ತು ಮೂಡಿಗೆರೆಯ ಲಿಂಗಪ್ಪ ಎಂಬವರನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಮ್ಮದೇ ಸಮುದಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಜು ಹೊಸ್ಮಠ ವಿರುದ್ಧ ಕೆಲವು ದಿನಗಳ ಹಿಂದೆ ಪೋಕ್ಸೋ ಕೇಸು ದಾಖಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ರಾಜು ಹೊಸ್ಮಠರವರು ತಲೆಮರೆಸಿಕೊಂಡಿದ್ದರು. ಅವರನ್ನು ಮೂಡಿಗೆರೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಪರಾರಿಯಾಗಲು ಸಹಕಾರ ನೀಡಿದ ಕಾರಣಕ್ಕಾಗಿ ಗಣೇಶ್ ಹಾಗೂ ಲಿಂಗಪ್ಪರವರನ್ನು ಬಂಧಿಸಲಾಗಿದೆ. ಈ ಮಧ್ಯೆ ರಾಜು ಹೊಸ್ಮಠರವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

You may also like

Leave a Comment