Home » ಚಿತ್ರದುರ್ಗ: ಭೀಕರ ಅಪಘಾತ, ಡಿವೈಎಸ್‌ಪಿ ವೈಷ್ಣವಿ ಗಂಭೀರ ಗಾಯ, ತಾಯಿ, ಚಾಲಕ ಸಾವು

ಚಿತ್ರದುರ್ಗ: ಭೀಕರ ಅಪಘಾತ, ಡಿವೈಎಸ್‌ಪಿ ವೈಷ್ಣವಿ ಗಂಭೀರ ಗಾಯ, ತಾಯಿ, ಚಾಲಕ ಸಾವು

0 comments

ಚಿತ್ರದುರ್ಗ: ಪ್ರವಾಸ ಮುಗಿಸಿ ಕೊಲ್ಲಾಪುರ ಡಿವೈಎಸ್‌ಪಿ ವೈಷ್ಣವಿ ಹಾಗೂ ಕುಟುಂಬದವರು ವಾಪಾಸು ಬರುತ್ತಿದ್ದ ಸಂದರ್ಭದಲ್ಲಿ ಕಾರು ಭೀಕರ ಅಪಘಾತಕ್ಕೀಡಾಗಿದೆ. ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್‌ ಬಳಿ ಲಾರಿಗೆ ಡಿಕ್ಕಿಯಾಗಿ ಅಪಘಾತ ನಡೆದಿದೆ.

ಈ ಭೀಕರ ಅಪಘಾತದಲ್ಲಿ ಪೊಲೀಸ್‌ ಅಧಿಕಾರಿ ವೈಷ್ಣವಿ ಸೇರಿ ಮೂವರು ಗಂಭೀರ ಗಾಯಗೊಂಡಿದ್ದು, ವೈಷ್ಣವಿ ತಾಯಿ 65 ವರ್ಷದ ಕಮಲ ಹರಿಬಾಬು ಹಾಗೂ ಕಾರು ಚಾಲಕ 40 ವರ್ಷದ ರಾಕೇಶ್‌ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೂವರು ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಮಿಳುನಾಡು ಪ್ರವಾಸ ಮುಗಿಸಿ ಕೊಲ್ಲಾಪುರಕ್ಕೆ ವಾಪಾಸು ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಿದೆ. ಕಾರು ಈ ಅಪಘಾತದಿಂದ ಸಂಪೂರ್ಣ ನಜ್ಜುಗುಜ್ಜಾಗಿದೆ.

You may also like