Home » ಬಂಟ್ವಾಳ: ಟೆಂಪೋ ವಾಹನ ಹಾಗೂ ಅನಿಲ ಸಾಗಾಟದ ಟ್ಯಾಂಕರ್‌ ನಡುವೆ ಅಪಘಾತ!

ಬಂಟ್ವಾಳ: ಟೆಂಪೋ ವಾಹನ ಹಾಗೂ ಅನಿಲ ಸಾಗಾಟದ ಟ್ಯಾಂಕರ್‌ ನಡುವೆ ಅಪಘಾತ!

0 comments

ಬಂಟ್ವಾಳ: ಖಾಸಗಿ ಸಂಸ್ಥೆಗೆ ಸೇರಿದ ಟೆಂಪೋ ವಾಹನವೊಂದು ಅನಿಲ ಸಾಗಾಟದ ಟ್ಯಾಂಕರ್‌ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುದ್ರೆಬೆಟ್ಟು ಎಂಬಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಕಲ್ಲಡ್ಕ ಫ್ಲೈ ಓವರ್‌ನಲ್ಲಿ ಟೆಂಪೋ ವಾಹನವು ಸಮುದ್ರ ಹೋಟೆಲ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕೈ ವಾಹನಗಳ ನಡುವೆ ಸಿಲುಕಿದೆ.

ಗ್ಯಾಸ್‌ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿರುವ ಪರಿಣಾ, ಅನಿಲ ಸೋರಿಕೆಯ ಭಯದಿಂದ ಯಾರೂ ವಾಹನಗಳ ಮೇಲೆ ಒತ್ತಡ ಹಾಕಿಲ್ಲ ಎನ್ನಲಾಗಿದೆ.

ಪೊಲೀಸ್‌ 112 ವಾಹನದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯರ ನೆರವಿನಿಂದ ಚಾಲಕನನ್ನು ಹೊರತೆಗಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನೆರವಾಗಿದ್ದಾರೆ.

You may also like