Home » Chitradurga: ಚಿತ್ರದುರ್ಗ ಬಸ್ ದುರಂತಕ್ಕೆ ರೋಚಕ ಟ್ಟಿಸ್ಟ್ – ಬಸ್ ಡಿಕ್ಕಿಯಲ್ಲಿ ದೊಡ್ಡ ಪ್ರಮಾಣದ ಆಯಿಲ್ ಬಾಕ್ಸ್ ಗಳು ಪತ್ತೆ!!

Chitradurga: ಚಿತ್ರದುರ್ಗ ಬಸ್ ದುರಂತಕ್ಕೆ ರೋಚಕ ಟ್ಟಿಸ್ಟ್ – ಬಸ್ ಡಿಕ್ಕಿಯಲ್ಲಿ ದೊಡ್ಡ ಪ್ರಮಾಣದ ಆಯಿಲ್ ಬಾಕ್ಸ್ ಗಳು ಪತ್ತೆ!!

0 comments

Chitradurga : ಚಿತ್ರದುರ್ಗ ಬಳಿಯ ಹಿರಿಯೂರು ಬಳಿ ನಡೆದ ಸ್ಲೀಪರ್ ಬಸ್ ದುರಂತ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಈ ದುರ್ಘಟನೆಯಲ್ಲಿ 6 ಮಂದಿ ಸಜೀವ ದಹನಗೊಂಡಿದ್ದು, ಇದೀಗ ಸಾವಿನ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಇದರ ನಡುವೆಯೇ ಅಪಘಾತಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಸ್ ಗೆ ಬೆಂಕಿ ಹತ್ತಿಕೊಳ್ಳಲು ಇದುವೇ ರೀಸನ್ ಎನ್ನಲಾಗಿದೆ.

ಹೌದು, ಹೊಸ ದುರಂತದ ತನಿಖೆಯ ಪ್ರಾಥಮಿಕ ವರದಿ ಬಿಡುಗಡೆಯಾಗಿದ್ದು ಸಾರಿಗೆ ಸಚಿವರ ಮಾಲಿಂಗ ರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದರು. ಲಾರಿ ಕಂಟೇನರ್​ ಚಾಲಕ ನಿದ್ದೆ ಮಂಪರಲ್ಲಿದ್ದ ಎನ್ನಲಾಗ್ತಿದೆ. ವೇಗವಾಗಿ ಚಲಿಸುತ್ತಿದ್ದ ವೇಳೆ ಲಾರಿ ಡಿವೈಡರ್ ಹಾರಿ ಎದುರಿಗೆ ಬರ್ತಿದ್ದ ಸೀಪರ್​ ಕೋಚ್​​ ಬಸ್​ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಘೋರ ದುರಂತ ಸಂಭವಿಸಿದೆ. ಅಲ್ಲದೆ ಕಂಟೇನರ್​ ಲಾರಿ ನೇರವಾಗಿ ಬಸ್​ನ ಡಿಸೇಲ್ ಟ್ಯಾಕ್​​ಗೆ ಗುದ್ದಿದೆ. ಹೀಗಾಗಿ ಡಿಸೇಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತನಿಖೆಯ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಆದರೆ ಇದಕ್ಕೆ ಬೆರೆಯೇ ಕಾರಣ ಎನ್ನಲಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ನಡೆದ ಈ ದುರ್ಘಟನೆಯಲ್ಲಿ, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ತನಿಖೆಯ ವೇಳೆ, ಅಪಘಾತಕ್ಕೀಡಾದ ಬಸ್‌ನೊಳಗೆ ರಾಶಿ ರಾಶಿ ಆಯಿಲ್ ಬಾಕ್ಸ್‌ಗಳು ಪತ್ತೆಯಾಗಿರುವುದು ಹೊಸ ತಿರುವನ್ನು ನೀಡಿದೆ. ಈ ಆಯಿಲ್ ಬಾಕ್ಸ್‌ಗಳ ಉಪಸ್ಥಿತಿಯು ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿ ನಿಯಂತ್ರಿಸಲು ಕಷ್ಟವಾಗಲು ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬಸ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಯಿಲ್ ಬಾಕ್ಸ್‌ಗಳು ಹೇಗೆ ಬಂದವು ಮತ್ತು ಇವುಗಳ ಸಾಗಣೆಗೆ ಅನುಮತಿ ಇತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಬಸ್ ದುರಂತದ ತೀವ್ರತೆಯನ್ನು ಹೆಚ್ಚಿಸಿ, ಹೆಚ್ಚಿನ ಹಾನಿಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. 

ಸಧ್ಯ ಬಸ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಯಿಲ್ ಬಾಕ್ಸ್‌ಗಳು ಹೇಗೆ ಬಂದವು ಮತ್ತು ಇವುಗಳ ಸಾಗಣೆಗೆ ಅನುಮತಿ ಇತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಬಸ್ ದುರಂತದ ತೀವ್ರತೆಯನ್ನು ಹೆಚ್ಚಿಸಿ, ಹೆಚ್ಚಿನ ಹಾನಿಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಈ ಘಟನೆ ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

You may also like