Chitradurga : ಚಿತ್ರದುರ್ಗ ಬಳಿಯ ಹಿರಿಯೂರು ಬಳಿ ನಡೆದ ಸ್ಲೀಪರ್ ಬಸ್ ದುರಂತ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಈ ದುರ್ಘಟನೆಯಲ್ಲಿ 6 ಮಂದಿ ಸಜೀವ ದಹನಗೊಂಡಿದ್ದು, ಇದೀಗ ಸಾವಿನ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಇದರ ನಡುವೆಯೇ ಅಪಘಾತದ (Accident) ಕಾರಣ ರಿವಿಲ್ ಆಗಿದೆ.
ಹೌದು, ಹೊಸ ದುರಂತದ ತನಿಖೆಯ ಪ್ರಾಥಮಿಕ ವರದಿ ಬಿಡುಗಡೆಯಾಗಿದ್ದು ಸಾರಿಗೆ ಸಚಿವರ ಮಾಲಿಂಗ ರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಲಾರಿ ಕಂಟೇನರ್ ಚಾಲಕ ನಿದ್ದೆ ಮಂಪರಲ್ಲಿದ್ದ ಎನ್ನಲಾಗ್ತಿದೆ. ವೇಗವಾಗಿ ಚಲಿಸುತ್ತಿದ್ದ ವೇಳೆ ಲಾರಿ ಡಿವೈಡರ್ ಹಾರಿ ಎದುರಿಗೆ ಬರ್ತಿದ್ದ ಸೀಪರ್ ಕೋಚ್ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಘೋರ ದುರಂತ ಸಂಭವಿಸಿದೆ. ಅಲ್ಲದೆ ಕಂಟೇನರ್ ಲಾರಿ ನೇರವಾಗಿ ಬಸ್ನ ಡಿಸೇಲ್ ಟ್ಯಾಕ್ಗೆ ಗುದ್ದಿದೆ. ಹೀಗಾಗಿ ಡಿಸೇಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತನಿಖೆಯ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
