Home » ಉಡುಪಿ: ಕಾರು ಮತ್ತು ಅಯ್ಯಪ್ಪ ಭಕ್ತರಿದ್ದ ವ್ಯಾನ್‌ ನಡುವೆ ಅಪಘಾತ

ಉಡುಪಿ: ಕಾರು ಮತ್ತು ಅಯ್ಯಪ್ಪ ಭಕ್ತರಿದ್ದ ವ್ಯಾನ್‌ ನಡುವೆ ಅಪಘಾತ

0 comments

ಉಡುಪಿ: ರಿಟ್ಜ್‌ ಕಾರು ಮತ್ತು ಅಯ್ಯಪ್ಪ ಭಕ್ತರಿದ್ದ ವ್ಯಾನ್‌ ನಡುವೆ ಅಪಘಾತ ಸಂಭವಿಸಿದ್ದು, ಪರ್ಕಳದ ಕೆನರಾ ಬ್ಯಾಂಕ್‌ ತಿರುವಿನ ಬಳಿ ನಡೆದಿರುವ ಕುರಿತು ವರದಿಯಾಗಿದೆ.

ಮಂಜು ಮುಸುಕಿದ ವಾತಾವರಣವಿದ್ದರಿಂದ ಪರ್ಕಳದ ಕೆನರಾ ಬ್ಯಾಂಕ್‌ ತಿರುವಿನ ಬಳಿ ರಸ್ತೆ ಅಪಘಾತ ನಡೆದಿದೆ. ಹಿರಯಡ್ಕದಿಂದ ಉಡುಪಿಯತ್ತ ಪ್ರಯಾಣ ಮಾಡುತ್ತಿದ್ದ ರಿಟ್ಜ್‌ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಕೆಳಪರ್ಕಳ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಅಯ್ಯಪ್ಪ ವ್ರತಧಾರಿಗಳ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.

ತೆಲಂಗಾಣ ಮೂಲದ ಅಯ್ಯಪ್ಪ ವ್ರತಧಾರಿಗಳು ಉಡುಪಿಯಿಂದ ಧರ್ಮಸ್ಥಳದತ್ತ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ರಿಟ್ಜ್‌ ಕಾರು ಸಂಪೂರ್ಣವಾಗಿ ಜಖಂ ಗೊಂಡಿದ್ದು, ಕಾರಿನಲ್ಲಿದ್ದ ಚಾಲಕನಿಗೆ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳೀಯ ಅಯ್ಯಪ್ಪ ವ್ರತಧಾರಿಗಳು ಹಾಗೂ ಸಾರ್ವಜನಿಕರು ಮಣಿಪಾಲ ಪೊಲೀಸರ ಜೊತೆ ಸೇರಿ ವಾಹನಗಳನ್ನು ರಸ್ತೆ ಬದಿಗೆ ತಂದಿದ್ದಾರೆ.

ಮಣಿಪಾಲ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

You may also like