Home » Kubera: ಸಂಪತ್ತು ನಿಮ್ಮನು ಆಕರ್ಷಿಸಲು ಈ 3 ಕುಬೇರ ಮಂತ್ರಗಳನ್ನು ಪಠಿಸಿದರೆ ಸಾಕು!

Kubera: ಸಂಪತ್ತು ನಿಮ್ಮನು ಆಕರ್ಷಿಸಲು ಈ 3 ಕುಬೇರ ಮಂತ್ರಗಳನ್ನು ಪಠಿಸಿದರೆ ಸಾಕು!

0 comments

Kubera: ದೇವರನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷವನ್ನು, ಸಮೃದ್ಧಿಯನ್ನು ಮತ್ತು ಸಕಾರಾತ್ಮಕತೆಯನ್ನು ಪಡೆದುಕೊಳ್ಳುವ ನಂಬಿಕೆ ಇದೆ. ಅಂತೆಯೇ ಹಿಂದೂ ಧರ್ಮ ಪ್ರಕಾರ, ಕುಬೇರ (Kubera) ಸಂಪತ್ತಿನ ರಕ್ಷಕನಾಗಿರುತ್ತಾನೆ. ಮೊದಲನೇಯದಾಗಿ ಅವನು ದೇವಾಲಯಗಳಲ್ಲಿ ದೇವರಿಗೆ ಸಂಬಂಧಿಸಿದ ಸಂಪತ್ತಿನ ರಕ್ಷಕನಾಗಿರುತ್ತಾನೆ ಮತ್ತು ಎರಡನೇಯದಾಗಿ, ಅವನು ಭಕ್ತರಿಗೆ ಸಂಪತ್ತನ್ನು ನೀಡುವವನಾಗಿರುತ್ತಾನೆ. ಮುಖ್ಯವಾಗಿ ಕುಬೇರನಿಂದ ಸಂಪತ್ತನ್ನು ಪಡೆದುಕೊಳ್ಳಲು ಈ ಮೂರು ಮಂತ್ರಗಳನ್ನು ಪಠಿಸಬೇಕು.

ಸಂಪತ್ತನ್ನು ನೀಡುವ ಕುಬೇರ ಮಂತ್ರಗಳು:

ಕುಬೇರ ಮಂತ್ರ:

”ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ

ಧನಧಾನ್ಯಧಿಪತಯೇ ಧನಧಾನ್ಯಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ||”

ಕುಬೇರ ಧನ ಪ್ರಾಪ್ತಿ ಮಂತ್ರ:

”ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ||”

Tulsi: ತುಳಸಿ ಗಿಡವನ್ನು ಈ 3 ತಿಂಗಳಲ್ಲಿ ನೆಟ್ಟರೆ ಶುಭ.!

ಕುಬೇರ ಅಷ್ಟಲಕ್ಷ್ಮಿ ಮಂತ್ರ:

”ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ

ಅಷ್ಟ-ಲಕ್ಷ್ಮೀ ಮಮ ಗೃಹೇ ಧನಂ ಪುರಯ ಪುರಯ ನಮಃ||”

ಅದಲ್ಲದೆ ಮನೆಯ ಉತ್ತರ ದಿಕ್ಕನ್ನು ಕುಬೇರ ದೇವನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ದಿಕ್ಕಿನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಂಪತ್ತು ನೆಲೆಯಾಗುತ್ತದೆ. ಇದರೊಂದಿಗೆ, ಗುರುವಾರ ಅಥವಾ ತ್ರಯೋದಶಿಯಂದು ಕುಬೇರ ಮಂತ್ರದೊಂದಿಗೆ ದೇವನನ್ನು ಪೂಜಿಸಬೇಕು ಹಾಗೂ ಕಮಲದ ಹೂವು ಸೇರಿದಂತೆ ಆತನಿಗೆ ಪ್ರಿಯವಾದ ಹೂವುಗಳನ್ನು ಅರ್ಪಿಸಬೇಕು.

ಇನ್ನು ಹಣ್ಣುಗಳಲ್ಲಿ ಕುಬೇರನು ದಾಳಿಂಬೆಯನ್ನು ಹೆಚ್ಚು ಇಷ್ಟಪಡುತ್ತಾನೆ. ಹಳದಿ ಬಣ್ಣದ ಲಡ್ಡುಗಳು, ಕೇಸರಿ ಖೀರ್, ಪೇಠಾ ಸೇರಿದಂತೆ ಇನ್ನಿತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಕುಬೇರ ದೇವರಿಗೆ ನೀಡಬಹುದು.

ಇದಲ್ಲದೆ ಕೊತ್ತಂಬರಿ, ಕಮಲದ ಬೀಜ, ಸುಗಂಧ ದ್ರವ್ಯ, ವೀಳ್ಯದೆಲೆ, ಲವಂಗ, ಏಲಕ್ಕಿ, ದುರ್ವ, ಅರಿಶಿನ, ಚೆಂಡು ಹೂವು, ಪಂಚಾಮೃತ, ಕೆಂಪು ಚಂದನ, ಪಂಚಮೇವ ಇತ್ಯಾದಿಗಳನ್ನು ಕುಬೇರ ದೇವನಿಗೆ ಅರ್ಪಿಸಬಹುದು.

You may also like

Leave a Comment